ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೇಯಿಂದ ವಿಮಾ ಬಿಡ್‌ಗೆ ಆಹ್ವಾನ
ರೈಲ್ವೇ ವಿಮಾ ಯೋಜನೆಗಾಗಿ ಖಾಸಗಿ ವಿಮಾ ಕಂಪನಿಗಳ ನಡುವೆ ಸ್ಪರ್ಧೆ ಹೆಚ್ಚುತ್ತಿರುವುದರೊಂದಿಗೆ, ಮುಂದಿನ ಒಂದು ವರ್ಷದಲ್ಲಿ ರೈಲ್ವೇ ವಿಮೆಯನ್ನು ನೀಡಲು ಸುಮಾರು 20 ವಿಮಾ ಸಂಸ್ಥೆಗಳನ್ನು ರೈಲ್ವೇ ಇಲಾಖೆ ಬಿಡ್‌ಗೆ ಆಹ್ವಾನಿಸಿದೆ.

ಐದು ಇತರ ಪ್ರಮುಖ ವಿಮಾ ಕಂಪನಿಗಳನ್ನು ಹಿಂದಿಕ್ಕುವ ಮೂಲಕ, ಕಳೆದ ವರ್ಷ ಐಸಿಐಸಿಐ ಈ ಬಿಡ್‌ ಗೆದ್ದುಕೊಂಡಿತ್ತು.

ಈ ವರ್ಷ, ಸೆಪ್ಟೆಂಬರ್ ಒಂದಕ್ಕೆ ಟೆಂಡರ್ ಕರೆಯಲಾಗಿದ್ದು, ಸುಮಾರು 20 ಸಂಸ್ಥೆಗಳಿಗೆ ಆಹ್ವಾನ ಕಳುಹಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೇ ಅಪಘಾತ ಮುಂತಾದವುಗಳ ವಿರುದ್ಧ ವಿಮಾ ರಕ್ಷಣೆಯನ್ನು 1989ರ ರೈಲ್ವೇ ಕಾಯಿದೆಯಡಿಯಲ್ಲಿ ಈ ರೈಲ್ವೇ ಪ್ರಯಾಣಿಕರ ವಿಮಾ ಯೋಜನೆಯು ನೀಡುತ್ತದೆ.
ಮತ್ತಷ್ಟು
ನ್ಯಾನೋಗೆ ಮುಖೇಶ್ ಅಂಬಾನಿ ಬೆಂಬಲ
'ನ್ಯಾನೋ'- ಟಾಟಾಗೆ ಕರ್ನಾಟಕ ಆಹ್ವಾನ
ನೋಕಿಯಾ, ಎಲ್‌ಜಿಯಿಂದ ನೂತನ ಮೊಬೈಲ್ ಫೋನ್
ಬ್ಯಾಂಕ್‌ಗಳಿಗೆ ಸರಕಾರದಿಂದ 25,000 ಕೋಟಿ ರೂ.
ಬಿಎಸ್ಎನ್ಎಲ್‌ನಿಂದ ನೂತನ ಬಿಲ್ಲಿಂಗ್ ವಿಧಾನ
ಕಬ್ಬಿಣದ ಅದಿರು ರಫ್ತು ಸುಂಕ ಹೆಚ್ಚಳಕ್ಕೆ ಒತ್ತಾಯ