ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
1996-2000ರಲ್ಲಿ ಮುದ್ರಿತ ನೋಟು ಅಮಾನ್ಯ: ಆರ್‌ಬಿಐ
ದೇಶದಾದ್ಯಂತ ವ್ಯಾಪಿಸಿರುವ ಖೋಟಾನೋಟು ದಂಧೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ, 1996-2000ದ ನಡುವೆ ಮುದ್ರಣಗೊಂಡ ನೋಟುಗಳನ್ನು ಹಿಂತೆಗೆದುಕೊಳ್ಳಲು ಹಣಕಾಸು ಸಚಿವಾಲಯವು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ನಿರ್ದೇಶನ ನೀಡಿದೆ.

ಹೆಚ್ಚಿನ ಖೋಟಾನೋಟುಗಳು 10, 20, 50 ಮತ್ತು 100 ಮುಖಬೆಲೆಯದ್ದಾಗಿದ್ದು, 1996-2000ರ ಸರಣಿಯದ್ದಾಗಿದೆ.

ನೂತನ ಸರಣಿಯ ನೋಟುಗಳು ಹೆಚ್ಚಿನ ಭದ್ರತಾ ವೈಶಿಷ್ಟ್ಯತೆಗಳನ್ನು ಹೊಂದಿದ್ದು, ನೂತನ ನಿರ್ದೇಶನವು ಜನವರಿ 2009ರಿಂದ ಜಾರಿಗೆ ಬರಲಿದೆ.

ಡಿಸೆಂಬರ್ 2007ರಲ್ಲಿ ಅಲಿಗರ್ ಎಸ್‌ಬಿಐನಿಂದ 12.66 ಲಕ್ಷ ರೂಪಾಯಿಯ ನಕಲಿ ನೋಟನ್ನು ಆರ್‌ಬಿಐ ವಶಪಡಿಸಿಕೊಂಡ ನಂತರ, ಖೋಟಾನೋಟು ದಂಧೆಯು ಬೆಳಕಿಗೆ ಬಂದಿತ್ತು. 2008ರ ಆಗಸ್ಟ್ 7ರಂದು ಅದೇ ಶಾಖೆಯಲ್ಲಿ ಆರ್‌ಬಿಐ ತಂಡವು ಮತ್ತೆ 46.24 ಲಕ್ಷ ರೂಪಾಯಿ ನಕಲಿ ನೋಟನ್ನು ವಶಪಡಿಸಿಕೊಂಡಿತ್ತು.
ಮತ್ತಷ್ಟು
ರೈಲ್ವೇಯಿಂದ ವಿಮಾ ಬಿಡ್‌ಗೆ ಆಹ್ವಾನ
ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಿಲರಿ ಹಿಂದಿಕ್ಕಿದ ಸೋನಿಯಾ
ನ್ಯಾನೋಗೆ ಮುಖೇಶ್ ಅಂಬಾನಿ ಬೆಂಬಲ
'ನ್ಯಾನೋ'- ಟಾಟಾಗೆ ಕರ್ನಾಟಕ ಆಹ್ವಾನ
ನೋಕಿಯಾ, ಎಲ್‌ಜಿಯಿಂದ ನೂತನ ಮೊಬೈಲ್ ಫೋನ್
ಬ್ಯಾಂಕ್‌ಗಳಿಗೆ ಸರಕಾರದಿಂದ 25,000 ಕೋಟಿ ರೂ.