ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂದಗೊಂಡ ಹಣದುಬ್ಬರ: 12.40ಕ್ಕೆ ಇಳಿಕೆ
ಕಳೆದ ಕೆಲವು ತಿಂಗಳುಗಳಿಂದ ಗಗನಾಭಿಮುಖಿಯಾಗಿದ್ದ ಹಣದುಬ್ಬರದಿಂದಾಗಿ ಬೆಲೆಯೇರಿಕೆ ಬಿಸಿಯಿಂದ ತತ್ತರಿಸಿದ್ದ ಜನಸಾಮಾನ್ಯರಿಗೆ ಒಂದಿಷ್ಟು ನೆಮ್ಮದಿ ಎಂಬಂತೆ, ಆಗಸ್ಟ್ 16ಕ್ಕೆ ಅಂತ್ಯಗೊಂಡ ವಾರದಲ್ಲಿ ಹಣದುಬ್ಬರವು 12.40ಕ್ಕೆ ಇಳಿಕೆಗೊಂಡಿದೆ. ಇದರಿಂದಾಗಿ ಹಣದುಬ್ಬರ ನಿಯಂತ್ರಣಕ್ಕಾಗಿ ನಿರಂತರ ಪ್ರಯತ್ನವನ್ನು ನಡೆಸುತ್ತಿರುವ ಸರಕಾರಕ್ಕೆ ಕೊಂಚ ನಿರಾಳವಾದಂತಾಗಿದೆ.

ಕಳೆದ ವಾರ ಹಣದುಬ್ಬರವು ಶೇ.12.63ರಷ್ಟಿದ್ದು, ಇದೀಗ 28 ವಾರಗಳಲ್ಲೇ ಮೊದಲ ಬಾರಿಗೆ ಇಳಿಕೆಗೊಂಡಿದೆಯಾದರೂ, ಮುಂದಿನ ವಾರ ಹಣದುಬ್ಬರ ಮತ್ತೆ ಏರಿಕೆಗೊಳ್ಳುವ ಸಾಧ್ಯತೆಯಿರುವುದು ಕಂಡುಬಂದಿದೆ.

ಪ್ರಾಥಮಿಕ ಉತ್ಪನ್ನಗಳಾದ ಹಣ್ಣು, ತರಕಾರಿಗಳ ಬೆಲೆಯಲ್ಲಿನ ಇಳಿಕೆಯು ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಅದಾಗ್ಯೂ, ಉತ್ಪಾದನಾ ವಸ್ತುಗಳ ಬೆಲೆಯಲ್ಲಿನ ಏರಿಕೆಯು ಹಣದುಬ್ಬರ ಹೆಚ್ಚಳದ ಆತಂಕವನ್ನು ಇನ್ನೂ ಉಳಿಸಿದೆ.

ಹಣದುಬ್ಬರದಲ್ಲಿ ಉಂಟಾದ ಇಳಿಕೆಯ ಬಗ್ಗೆ ಸರಕಾರವು ತೃಪ್ತಿ ವ್ಯಕ್ತಪಡಿಸಿದ್ದು, ಇದು ಹಣದುಬ್ಬರ ನಿಯಂತ್ರಣ ಕ್ರಮಗಳು ಫಲಿಸುತ್ತಿರುವ ಸಂಕೇತವಾಗಿದೆ ಎಂದು ಹೇಳಿದೆ.

ಹಾಲು ಉತ್ಪನ್ನದ ಬೆಲೆಯಲ್ಲಿನ ಏರಿಕೆಯು ಆತಂಕಕಾರಿ ವಿಷಯವಾಗಿದ್ದರೂ, ಪ್ರಾಥಮಿಕ ಉತ್ಪನ್ನಗಳಲ್ಲಿ ಬೆಲೆಯಲ್ಲಿನ ಇಳಿಕೆಯು ಹಣದುಬ್ಬರದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರಿದೆ.

ಉಳಿದಂತೆ, ಮಾಂಸ, ತರಕಾರಿ, ಮೊಟ್ಟೆಸ ಮೀನು ಮತ್ತು ಇಂಧನ ಹಾಗೂ ವಿದ್ಯುತ್ ಬೆಲೆಯಲ್ಲಿ ಶೇ.1ರಷ್ಟು ಇಳಿಕೆ ಉಂಟಾಗಿದೆ.

ಅದೇನಿದ್ದರೂ, ಆವಶ್ಯಕ ಉತ್ಪನ್ನಗಳಾದ ಬೇಳೆಕಾಳು. ಸಂಬಾರ, ಕಬ್ಬಿಣ ಮತ್ತು ಸ್ಟೀಲ್ ಉತ್ಪನ್ನಗಳ ಬೆಲೆಗಳು ಏರುಮುಖದಲ್ಲೇ ಇದೆ.
ಮತ್ತಷ್ಟು
ಜನರಲ್ ಮೋಟಾರ್ಸ್‌ನಿಂದ ಸಣ್ಣ ಕಾರು
1996-2000ರಲ್ಲಿ ಮುದ್ರಿತ ನೋಟು ಅಮಾನ್ಯ: ಆರ್‌ಬಿಐ
ರೈಲ್ವೇಯಿಂದ ವಿಮಾ ಬಿಡ್‌ಗೆ ಆಹ್ವಾನ
ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಿಲರಿ ಹಿಂದಿಕ್ಕಿದ ಸೋನಿಯಾ
ನ್ಯಾನೋಗೆ ಮುಖೇಶ್ ಅಂಬಾನಿ ಬೆಂಬಲ
'ನ್ಯಾನೋ'- ಟಾಟಾಗೆ ಕರ್ನಾಟಕ ಆಹ್ವಾನ