ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರ್ಷದೊಳಗೆ 3ಜಿ ಸೇವೆ: ಸಚಿವ ರಾಜ
3ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆಯನ್ನು ಅಕ್ಟೋಬರ್ ತಿಂಗಳೊಳಗೆ ಪೂರ್ಣಗೊಳಿಸುವುದಾಗಿ ಟೆಲಿಕಾಂ ಸಚಿವ ಎ.ರಾಜ ತಿಳಿಸಿದ್ದಾರೆ.

ಅಕ್ಟೋಬರ್ ತಿಂಗಳೊಳಗೆ 3ಜಿ ಹರಾಜು ಪ್ರಕ್ರಿಯೆಯು ಪೂರ್ಣಗೊಳ್ಳಲಿದ್ದು, ಉನ್ನತ ದರ್ಜೆಯ 3ಜಿ ಸೇವೆಯನ್ನು ವರ್ಷದೊಳಗೆ ಪ್ರಾರಂಭಿಸುವುದಾಗಿ ರಾಜ ಇದೇ ವೇಳೆ ಭರವಸೆ ನೀಡಿದ್ದಾರೆ.

ಇನ್ನೊಂದು ಪ್ರಮುಖ ಬೆಳವಣಿಗೆಯೆಂಬಂತೆ, 3ಜಿ ಸೇವೆಗಾಗಿ ಸಿಡಿಎಂಎ ನಿರ್ವಾಹಕರಿಗಾಗಿ ಸ್ಪೆಕ್ಟ್ರಂ ಅನ್ನು, ಜಿಎಸ್ಎಂ ನಿರ್ವಾಹಕರಿಗೆ ಮಾಡಿದ ರೀತಿಯಲ್ಲಿಯೇ ಹರಾಜು ಮಾಡಲಾಗುವುದು ಎಂದು ರಾಜ ತಿಳಿಸಿದ್ದಾರೆ.

ಈ ಮೊದಲು ಸಿಡಿಎಂಎ ವಿಭಾಗದಲ್ಲಿ ಅಷ್ಟೊಂದು ಸ್ಪರ್ಧೆಯಿರಲಿಲ್ಲ. ಕೇವಲ ಎರಡೇ ಸ್ಪರ್ಧಿಗಳಿದ್ದರು. ಆದರೆ, ಈಗ ಸ್ಪರ್ಧಿಗಳ ಸಂಖ್ಯೆಯಲ್ಲಿ ಹೆಚ್ಚಳ ಉಂಟಾದ ಕಾರಣ, ಟ್ರಾಯ್ ಶಿಫಾರಸ್ಸಿನ ಆಧಾರದಲ್ಲೇ ಹರಾಜನ್ನು ನಡೆಸಲಾಗುತ್ತದೆ ಎಂದು ಸಚಿವರು ಸೂಚಿಸಿದ್ದಾರೆ.
ಮತ್ತಷ್ಟು
ಮಂದಗೊಂಡ ಹಣದುಬ್ಬರ: 12.40ಕ್ಕೆ ಇಳಿಕೆ
ಜನರಲ್ ಮೋಟಾರ್ಸ್‌ನಿಂದ ಸಣ್ಣ ಕಾರು
1996-2000ರಲ್ಲಿ ಮುದ್ರಿತ ನೋಟು ಅಮಾನ್ಯ: ಆರ್‌ಬಿಐ
ರೈಲ್ವೇಯಿಂದ ವಿಮಾ ಬಿಡ್‌ಗೆ ಆಹ್ವಾನ
ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಿಲರಿ ಹಿಂದಿಕ್ಕಿದ ಸೋನಿಯಾ
ನ್ಯಾನೋಗೆ ಮುಖೇಶ್ ಅಂಬಾನಿ ಬೆಂಬಲ