ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ.7.9ಕ್ಕಿಳಿದ ರಾಷ್ಟ್ರದ ಆರ್ಥಿಕ ಅಭಿವೃದ್ಧಿ ದರ
ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಅಭಿವೃದ್ಧಿಯು ಶೇ,7.9ಕ್ಕೆ ಇಳಿಕೆಗೊಂಡಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಶೇ.9.2ರಷ್ಟಿತ್ತು.

ಎರಡಂಕಿ ಹಣದುಬ್ಬರವನ್ನು ನಿಯಂತ್ರಿಸಲು ಆರ್‌ಬಿಐ ಕಠಿಣ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ, ಜಿಡಿಪಿ ಬೆಳವಣಿಗೆಯಲ್ಲಿನ ಇಳಿಕೆಯು ನಿರೀಕ್ಷಿತವಾಗಿದೆ.

ಹೆಚ್ಚಿದ ಬಡ್ಡಿದರಗಳಿಂದಾಗಿ, ಕಳೆದ ವರ್ಷ ಶೇ.10.9ರಷ್ಟಿದ್ದ ಉತ್ಪಾದನಾ ಅಭಿವೃದ್ಧಿಯು ಶೇ.5.6ಕ್ಕೆ ಇಳಿಕೆಗೊಂಡಿದೆ. ಕೃಷಿ ಅಭಿವೃದ್ಧಿಯು ಕೂಡಾ ಶೇ.ಮೂರರಷ್ಟಿದ್ದು, ಇದು ಅಂದಾಜು ಅಭಿವೃದ್ಧಿ ಪ್ರಮಾಣಕ್ಕಿಂತ ಕಡಿಮೆಯಾಗಿದೆ.

ಉಳಿದಂತೆ, ವಿದ್ಯುತ್ ಅನಿಲ ಮತ್ತು ಜಲ ಕ್ಷೇತ್ರಗಳಲ್ಲಿನ ಅಭಿವೃದ್ಧಿಯಲ್ಲಿಯೂ ಕುಂಠಿತ ಉಂಟಾಗಿದೆ.

ಸೇವಾ ಕ್ಷೇತ್ರಗಳಾದ ವ್ಯಾಪಾರ, ಹೋಟೇಲ್, ಸಂಚಾರ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಶೇ.11.2ರಷ್ಟು ಏರಿಕೆ ಉಂಟಾಗಿದೆ. ಇದರೊಂದಿಗೆ, ಹಣಕಾಸು, ಸ್ಥಿರಾಸ್ತಿ ಮತ್ತು ವ್ಯವಹಾರ ಸೇವಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿಯೂ ಹೆಚ್ಚಳವಾಗಿದೆ.
ಮತ್ತಷ್ಟು
ವರ್ಷದೊಳಗೆ 3ಜಿ ಸೇವೆ: ಸಚಿವ ರಾಜ
ಮಂದಗೊಂಡ ಹಣದುಬ್ಬರ: 12.40ಕ್ಕೆ ಇಳಿಕೆ
ಜನರಲ್ ಮೋಟಾರ್ಸ್‌ನಿಂದ ಸಣ್ಣ ಕಾರು
1996-2000ರಲ್ಲಿ ಮುದ್ರಿತ ನೋಟು ಅಮಾನ್ಯ: ಆರ್‌ಬಿಐ
ರೈಲ್ವೇಯಿಂದ ವಿಮಾ ಬಿಡ್‌ಗೆ ಆಹ್ವಾನ
ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಹಿಲರಿ ಹಿಂದಿಕ್ಕಿದ ಸೋನಿಯಾ