ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರ್-ತೀವ್ರವಾದ ಪ್ರತಿಭಟನೆ: ನ್ಯಾನೋ ಕಾರ್ಯ ಸ್ಥಗಿತ
ಸಿಂಗೂರಿನಲ್ಲಿರುವ ಟಾಟಾ ಮೋಟಾರ್ಸ್‌ನ ನ್ಯಾನೋ ಸ್ಥಾವರದ ಪ್ರವೇಶವನ್ನು ತೃಣಮೂಲ ಕಾಂಗ್ರೆಸ್ ಪ್ರತಿಭಟನಾಕಾರರು ನಿರ್ಬಂಧಿಸಿದ್ದು, ಘಟಕದ ಕಾರ್ಯವು ಸ್ಥಗಿತಗೊಂಡಿದೆ ಎಂದು ಟಾಟಾ ವಕ್ತಾರರು ತಿಳಿಸಿದ್ದಾರೆ.

ನ್ಯಾನೋ ಸ್ಥಾವರದ ಸುತ್ತಲಿನ ಪ್ರದೇಶವನ್ನು ಮಮತಾ ಬ್ಯಾನರ್ಜಿ ಬೆಂಬಲಿಗರು ಸುತ್ತುವರಿದಿದ್ದು, ನ್ಯಾನೋ ನೌಕರರನ್ನು ಘಟಕದೊಳಗೆ ಪ್ರವೇಶಿಸಲು ಬಿಡುತ್ತಿಲ್ಲ.

ಹಿಂಸಾಚಾರಕ್ಕೆ ಅಂಜಿ ನ್ಯಾನೋ ನೌಕರರು ಸ್ಥಾವರದಿಂದ ದೂರ ಉಳಿದಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

ಕೃಷಿ ಜಾಮಿ ರಕ್ಷಾ ಸಮಿತಿಯ ಪಾಲುದಾರ ಮತ್ತು ನಕ್ಸಲೈಟ್ ನಾಯಕ ಪೂರ್ಣೇಂದು ಬೋಸ್, ನ್ಯಾನೋ ಘಟಕವನ್ನು ನಿರ್ಬಂಧಿಸುವುದಾಗಿ ಘೋಷಿಸಿದ್ದರು. ಟಾಟಾ ಸ್ಥಾವರದ ತೃಣಮೂಲ ಕಾಂಗ್ರೆಸ್‌ನ ಪ್ರತಿಭಟನೆಯಲ್ಲಿ ಬೋಸ್ ಅವರೂ ಭಾಗಿಯಾಗಿದ್ದರು. ಆಗಸ್ಟ್ 20ರಂದು ಸರಕಾರದೊಂದಿಗಿನ ಮಾತುಕತೆಯಲ್ಲಿ ಭಾಗವಹಿಸಲು ಮಮತಾ ಬೋಸ್ ಹೆಸರನ್ನೂ ಪ್ರಸ್ತಾಪಿಸಿದ್ದರು.

ತೃಣಮೂಲ ಕಾಂಗ್ರೆಸ್‌ನ ಈ ಪಟ್ಟುಬಿಡದ ಪ್ರತಿಭಟನೆಯು 400 ಎಕರೆ ಜಮೀನನ್ನು ರೈತರಿಗೆ ಹಿಂತಿರುಗಿಸಬೇಕೆನ್ನುವ ತೃಣಮೂಲ ಬೇಡಿಕೆಯನ್ನು ರಾಜ್ಯ ಸರಕಾರವು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿಯನ್ನು ಉಂಟುಮಾಡಿದೆ.
ಮತ್ತಷ್ಟು
ಶೇ.7.9ಕ್ಕಿಳಿದ ರಾಷ್ಟ್ರದ ಆರ್ಥಿಕ ಅಭಿವೃದ್ಧಿ ದರ
ವರ್ಷದೊಳಗೆ 3ಜಿ ಸೇವೆ: ಸಚಿವ ರಾಜ
ಮಂದಗೊಂಡ ಹಣದುಬ್ಬರ: 12.40ಕ್ಕೆ ಇಳಿಕೆ
ಜನರಲ್ ಮೋಟಾರ್ಸ್‌ನಿಂದ ಸಣ್ಣ ಕಾರು
1996-2000ರಲ್ಲಿ ಮುದ್ರಿತ ನೋಟು ಅಮಾನ್ಯ: ಆರ್‌ಬಿಐ
ರೈಲ್ವೇಯಿಂದ ವಿಮಾ ಬಿಡ್‌ಗೆ ಆಹ್ವಾನ