ತೆರಿಗೆ ವಿಧಾನ ಮತ್ತು ವಿಮಾನ ನಿಲ್ದಾಣಗಳಲ್ಲಿನ ಇಂಧನ ಮೂಲಸೌಕರ್ಯದ ನಿಯಂತ್ರಣಕ್ಕಾಗಿ, ಭಾರತೀಯ ವಿಮಾನ ನಿಲ್ದಾಣಗಳು ಸದ್ಯದಲ್ಲಿಯೇ ಆರ್ಥಿಕ ನಿಯಂತ್ರಣ ಮಂಡಳಿಯೊಂದನ್ನು ಹೊಂದಲಿವೆ.
ಭಾರತೀಯ ವಿಮಾನ ನಿಲ್ದಾಣ ನಿಯಂತ್ರಣ ಪ್ರಾಧಿಕಾರ-2007ರ ತಿದ್ದುಪಡಿಗೆ ಸರಕಾರವು ಶುಕ್ರವಾರ ಅನುಮೋದನೆ ನೀಡಿದೆ.
ಸಂಸತ್ ಸಮಿತಿಯ ಶಿಫಾರಸ್ಸಿನ ಮೇರೆಗೆ ತಿದ್ದುಪಡಿ ಮಾಡಲು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ನೇತೃತ್ವದ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ವೈಮಾನಿಕ ಮತ್ತು ವೈಮಾನಿಕೇತರ ಸೇವೆಗಳಲ್ಲಿನ ತೆರಿಗೆಯ ಬಗ್ಗೆ ನಿರ್ಧರಿಸಿ, ವಿಮಾನ ನಿಲ್ದಾಣದ ಇಂಧನ ಪೂರೈಕೆ ಮೂಲಸೌಕರ್ಯದ ಅಧಿಕಾರವನ್ನು ವಿಮಾನ ನಿಲ್ದಾಣ ನಿಯಂತ್ರಣ ಪ್ರಾಧಿಕಾರಕ್ಕೆ ನೀಡುವ ಕುರಿತಾಗಿಯೂ ಸಮಿತಿಯು ಶಿಫಾರಸ್ಸು ಮಾಡಿತ್ತು.
ಈ ಅಧಿಕೃತ ತಿದ್ದುಪಡಿಯು ವಿಮಾನ ನಿಲ್ದಾಣ ನಿಯಂತ್ರಣ ಪ್ರಾಧಿಕಾರವನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಹೇಳಿದ್ದಾರೆ.
|