ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉದ್ಯಮಿ ಕೆ.ಕೆ.ಬಿರ್ಲಾ ನಿಧನ
ಪ್ರಖ್ಯಾತ ಉದ್ಯಮಿ ಮತ್ತು ಮಾಜಿ ರಾಜ್ಯ ಸಭಾ ಸದಸ್ಯ ಕೆ.ಬಿರ್ಲಾ ಅಲ್ಪಕಾಲ ಅಸೌಖ್ಯದಿಂದ ಕೋಲ್ಕತ್ತಾದ ತನ್ನ ನಿವಾಸದಲ್ಲಿ ಶನಿವಾರ ಮುಂಜಾನೆ ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ಹಿಂದೂಸ್ಥಾನ್ ಟೈಮ್ಸ್‌ನ ಹಾಗೂ ಅನೇಕ ಬಿರ್ಲಾ ಸಮೂಹ ಉದ್ಯಮಗಳ ಮುಖ್ಯಸ್ಥರಾಗಿದ್ದ ಬಿರ್ಲಾ ಅವರನ್ನು ಹಿಂದೂಸ್ಥಾನ ಟೈಮ್ಸ್‌ನ ಉಪಾಧ್ಯಕ್ಷೆ ಮತ್ತು ಸಂಪಾದಕೀಯ ಸಲಹಾಗಾರರಾಗಿರುವ ತನ್ನ ಪುತ್ರಿಯರಾದ ನಂದಿನಿ ನೂಪನಿ, ಶೋಭನಾ ಭಾರ್ಟಿಯಾ ಅವರು ನೋಡಿಕೊಳ್ಳುತ್ತಿದ್ದರು.

ಕಳೆದು ಎರಡು ವಾರಗಳಿಂದ ಅಸೌಖ್ಯತೆಯಿಂದ ಬಳಲುತ್ತಿದ್ದ ಬಿರ್ಲಾ ಇಂದು ಮುಂಜಾನೆ 7.30ಕ್ಕೆ ನಿಧನ ಹೊಂದಿದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಬಿರ್ಲಾ ಅವರ ಪತ್ನಿ ಮನೋರಮಾ ದೇವಿ ಬಿರ್ಲಾ ತಿಂಗಳುಗಳ ಹಿಂದೆ ನಿಧನರಾಗಿದ್ದರು.

ಘನಶ್ಯಾಮ್ ದಾಸ್ ಬಿರ್ಲಾ ಅವರ ಪುತ್ರನಾಗಿರುವ ಬಿರ್ಲಾ, 1918 ಅಕ್ಟೋಬರ್ 12ರಂದು ರಾಜಸ್ಥಾನದ ಪಿಲಾನಿಯಲ್ಲಿ ಜನಿಸಿದ್ದರು.

1940ರಲ್ಲಿ ಸ್ಥಾಪನೆಗೊಂಡಿದ್ದ ಭಾರತೀಯ ಸಕ್ಕರೆ ಉದ್ಯಮದ ಸಂಸ್ಥಾಪಕ ಸದಸ್ಯರಲ್ಲಿ ಇವರು ಒಬ್ಬರಾಗಿದ್ದರು. ಸಕ್ಕರೆ, ರಸಗೊಬ್ಬರ, ರಾಸಾಯನಿಕ, ಇಂಜಿನಿಯರಿಂಗ್, ಜವಳಿ, ಪತ್ರಿಕೆ ಮುಂತಾದ ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಪ್ರಸಿದ್ಧರಾಗಿದ್ದರು.

ಪ್ರಮುಖ ಉದ್ಯಮಿಯಾಗಿದ್ದ ಬಿರ್ಲಾ, ಗೌರವಾನ್ವಿತ ಸಂಸತ್ ಸದಸ್ಯರಾಗಿದ್ದರು. ಅಗಾಧ ಪಾಂಡಿತ್ಯ ಹೊಂದಿದ್ದ ಬಿರ್ಲಾ ಲೋಕೋಪಕಾರಿಯಾಗಿದ್ದರು.

ಭಾರತೀಯ ಸಾಹಿತ್ಯ, ವಿಜ್ಞಾನ ಮತ್ತು ಭಾರತೀಯ ಆಧ್ಯಾತ್ಮದಲ್ಲಿ ಪರಿಣಿತಿ ಹೊಂದಿದವರಿಗಾಗಿ ವಾರ್ಷಿಕ ಪ್ರಶಸ್ತಿಯನ್ನು ನೀಡಲು, ಕೆ.ಕೆ.ಬಿರ್ಲಾ ಸಂಸ್ಥಾನವನ್ನು ಸ್ಥಾಪಿಸಿದ್ದರು.
ಮತ್ತಷ್ಟು
ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ನ್ಯಾನೋ ನೌಕರರು
ವಿಮಾನ ನಿಲ್ದಾಣಗಳಿಗೆ ಆರ್ಥಿಕ ನಿಯಂತ್ರಣ ಮಂಡಳಿ
ಸಿಂಗೂರ್-ತೀವ್ರವಾದ ಪ್ರತಿಭಟನೆ: ನ್ಯಾನೋ ಕಾರ್ಯ ಸ್ಥಗಿತ
ಶೇ.7.9ಕ್ಕಿಳಿದ ರಾಷ್ಟ್ರದ ಆರ್ಥಿಕ ಅಭಿವೃದ್ಧಿ ದರ
ವರ್ಷದೊಳಗೆ 3ಜಿ ಸೇವೆ: ಸಚಿವ ರಾಜ
ಮಂದಗೊಂಡ ಹಣದುಬ್ಬರ: 12.40ಕ್ಕೆ ಇಳಿಕೆ