ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರ್ ಪ್ರತಿಭಟನಾಕಾರರ ಭೋಜನ ವೆಚ್ಚ 2.5 ಲಕ್ಷ!
ಟಾಟಾ ಮೋಟಾರ್ಸ್ ವಿರುದ್ಧ ಸಿಂಗೂರಿನಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಯು ದಿನದಿಂದ ದಿನಕ್ಕೆ ಕಾವೇರುತ್ತಿದ್ದಂತೆಯೇ, ಎಲ್ಲೆಡೆ ಬಿಸಿಬಿಸಿ ಸುದ್ದಿಮಾಡುತ್ತಿರುವ ಪ್ರತಿಭಟನೆಯು ಅತ್ಯಂತ ದುಬಾರಿಯಾಗುತ್ತಿದೆ.

ಪ್ರತಿಭಟಾನಾಕಾರರಿಗಾಗಿ ರೂಪ್ನರಾಯನಪುರ್ ಕೃಷಿ ಸಹಕಾರ ಸಂಘದಲ್ಲಿರುವ ತಾತ್ಕಾಲಿಕ ಅಡುಗೆ ಕೇಂದ್ರದಲ್ಲಿ ಗುರುವಾರ ಮುಂಜಾನೆ ಮತ್ತು ಸಂಜೆ ಎರಡು ಅವಧಿಗಳಲ್ಲಿ ಸುಮಾರು 90,000 ಮಂದಿಗಾಗುವಷ್ಟು ಭೋಜನ ತಯಾರಾಗಿದೆ. ಇಷ್ಟೊಂದು ಮಂದಿಗೆ ಅಡುಗೆ ತಯಾರಿಕೆಯಲ್ಲಿ ಸುಮಾರು 50 ಮಂದಿ ಅಡಿಗೆಯವರು ನಿರತರಾಗಿದ್ದು, ಭಾನುವಾರ ಪ್ರತಿಭಟನೆ ಪ್ರಾರಂಭಗೊಂಡಂದಿನಿಂದ ಬಿಡುವಿಲ್ಲದೆ ದುಡಿಯುತ್ತಿದ್ದಾರೆ.

ರಾತ್ರಿ ನಿದ್ರಿಸಲು ಸ್ವಲ್ಪ ಸಮಯವಷ್ಟೇ ಸಿಗುತ್ತಿದ್ದು, ಮರುದಿವಸ 7000-10000 ಮಂದಿಗೆ ಊಟ ತಯಾರಿಸಲು ಮುಂಜಾನೆ ನಾಲ್ಕು ಗಂಟೆಗೇ ಅಡುಗೆ ಕಾರ್ಯವನ್ನು ಪ್ರಾರಂಭಿಸಬೇಕಾಗುತ್ತದಎಂಬುದಾಗಿ ಅಡುಗೆಯವರು ಹೇಳುತ್ತಾರೆ.

ನ್ಯಾನೋ ಕಾರ್ಖಾನೆಯ ಎದುರುಭಾಗದಲ್ಲಿ ಅಡುಗೆಶಾಲೆಯಿದ್ದು, ಇದು ಊಟ ವಿತರಿಸುವ ಕೇಂದ್ರದಿಂದ ಸುಮಾರು 50 ಮೀಟರ್ ದೂರದಲ್ಲಿದೆ. ಒಮ್ಮೆಗೆ 150-200 ಮಂದಿ ಮಾಡಿದ ಅಡುಗೆಯನ್ನು ಬಡಿಸುತ್ತಾರೆ. ಇದು ಅಂಥಾ ಭೂರಿ ಭೋಜವಲ್ಲದಿದ್ದರೂ, ಭಾನುವಾರ ಪ್ರತಿಭಟನೆ ಪ್ರಾರಂಭಗೊಂಡಂದಿನಿಂದ ಈವರೆಗೆ ಕೇವಲ ಪ್ರತಿಭಟನಾಕಾರರ ಊಟಕ್ಕಾಗಿ ಹತ್ತು ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದೆ.

ಸುಮಾರು ಐದು ಸಾವಿರ ಮಂದಿ ಪ್ರತಿಭಟನಾಕಾರರಿದ್ದಲ್ಲಿ ಅನ್ನ, ದಾಲ್ ಮತ್ತು ಸಬ್ಜಿ ನೀಡಲಾಗುತ್ತಿದ್ದು, ಅದಕ್ಕಿಂತಲೂ ಹೆಚ್ಚಿದ್ದಲ್ಲಿ ಕಿಚಡಿಯನ್ನು ನೀಡಲಾಗುತ್ತಿದೆ.

ಮುಂಜಾನೆ ನಾಲ್ಕು ಗಂಟೆಗೇ ಅಡುಗೆ ಕಾರ್ಯವನ್ನು ಪ್ರಾರಂಭಿಸುತ್ತೇವೆ. ಸಾಕಷ್ಟು ಮಂದಿಗೆ ಅಡುಗೆ ತಯಾರಿಸುವುದು ಅಷ್ಟೊಂದು ಸುಲಭವೇನಲ್ಲ ಎಂದು ಸಹಾಯಕ ಅಡುಗೆಯವರೊಬ್ಬರು ಹೇಳುತ್ತಾರೆ. ಇವರು ಹೇಳುವಂತೆ, ಒಂದು ದಿನದಲ್ಲಿ ಮಧ್ಯಾಹ್ನದವರೆಗೂ ಸುಮಾರು 150 ಕಡಾಯಿ ಕಿಚಡಿಯನ್ನು ತಯಾರಿಸಲಾಗಿದ್ದು, ಕಿಚಡಿ ತಯಾರಿಕೆಯು ಮತ್ತಷ್ಟು ಮುಂದುವರಿಯುತ್ತಿದೆ.

ಕೇವಲ ಅಡುಗೆಯವರಿಗೆ ಮಾತ್ರವಲ್ಲ, ಮಾಡಿದ ಅಡುಗೆಯನ್ನು ಬಡಿಸುವ ಕೃಷಿ ಜಾಮಿ ರಕ್ಷಾ ಸಮಿತಿಯ ಕಾರ್ಯಕರ್ತರು ಮತ್ತು ನೌಕರರಿಗೂ ವಿಶ್ರಾಂತಿಯಿಲ್ಲದಂತಾಗಿದೆ.

ಪ್ರತಿ ಅಡುಗೆಯವರ ವೇತನವು ಪ್ರತಿದಿನಕ್ಕೆ ನೂರು ರೂಪಾಯಿ ನಿಗದಿ ಮಾಡಲಾಗಿದ್ದು, ಪ್ರತಿಭಟನಾ ಸ್ಥಳದಲ್ಲಿ ಈ ಮೊತ್ತವನ್ನು ಅಡುಗೆಯವರಿಗೆ ನೀಡಲಾಗುತ್ತಿದೆಯೇ ಎಂಬುದು ಅಸ್ಪಷ್ಟ. ಸಾಮಾನ್ಯ ದರದ ಮೂಲಕ ಮಾಡಿದ ಅಂದಾಜಿನ ಪ್ರಕಾರ, ಪ್ರಸಕ್ತ ಬಿಲ್ ಮೊತ್ತವು ಈಗಾಗಲೇ 25000 ರೂಪಾಯಿ ದಾಟಿದೆ.

ಇಷ್ಟು ಮಾತ್ರವಲ್ಲದೇ, ಪ್ರತಿಭಟನಾ ಸ್ಥಳದಲ್ಲಿ ರಿಕ್ಷಾ ಎಳೆಯುವವರು, ಟ್ರಕ್ ಚಾಲಕರು, ಐಸ್‌ಕ್ರೀಂ ಮಾರಾಟಗಾರರು ಮತ್ತು ಇತರ ವ್ಯಾಪಾರಿಗಳು ವ್ಯವಹಾರ ನಡೆಸುತ್ತಿದ್ದು, ಒಟ್ಟಾರೆ, ಇದೊಂದು ಆರ್ಥಿಕ ಕೇಂದ್ರವಾಗಿ ಹೊರಹೊಮ್ಮಿದೆ. ಈ ಎಲ್ಲಾ ವ್ಯಾಪಾರಿಗಳು ಐದು ದಿನಗಳಲ್ಲಿ ಸುಮಾರು 5 ಲಕ್ಷ ರೂಪಾಯಿ ವ್ಯವಹಾರ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಸಿಂಗೂರ್ ವಿವಾದದಿಂದ ರಾಷ್ಟ್ರದ ಪ್ರತಿಷ್ಠೆಗೆ ಹಾನಿ: ಸಿಐಐ
ಉದ್ಯಮಿ ಕೆ.ಕೆ.ಬಿರ್ಲಾ ನಿಧನ
ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ನ್ಯಾನೋ ನೌಕರರು
ವಿಮಾನ ನಿಲ್ದಾಣಗಳಿಗೆ ಆರ್ಥಿಕ ನಿಯಂತ್ರಣ ಮಂಡಳಿ
ಸಿಂಗೂರ್-ತೀವ್ರವಾದ ಪ್ರತಿಭಟನೆ: ನ್ಯಾನೋ ಕಾರ್ಯ ಸ್ಥಗಿತ
ಶೇ.7.9ಕ್ಕಿಳಿದ ರಾಷ್ಟ್ರದ ಆರ್ಥಿಕ ಅಭಿವೃದ್ಧಿ ದರ