ಅಶಕ್ತರಿಗೆ ತಂತ್ರಜ್ಞಾನ ಪ್ರಯೋಜನಗಳನ್ನು ಪರಿಚಯಿಸಿಕೊಡುವ ನಿಟ್ಟಿನಲ್ಲಿ ರಾಯಲ್ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಬ್ಲೈಂಡ್(ಯುಕೆ) ಮತ್ತು ಬ್ಯಾರಿಯರ್‌ಬ್ರೇಕ್ ಟೆಕ್ನಾಲಜಿ ಬೆಂಗಳೂರಿನ ಜೆ.ಪಿ.ನಗರದ ಮೊಬಿಲಿಟಿ ಇಂಡಿಯಾ ಆವರಣದಲ್ಲಿ ಯುರೋಪಿನ ಅತಿ ದೊಡ್ಡ ತಂತ್ರಜ್ಞಾನ ಟೆಕ್‌ಶೇರ್ ಇಂಡಿಯಾ 2008 ಸಮಾವೇಶವನ್ನು ಶನಿವಾರ ಆಯೋಜಿಸಿತ್ತು.
ದಕ್ಷಿಣ ಭಾರತದಲ್ಲಿ ಅಶಕ್ತರಿಗಾಗಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮವನ್ನು ಕರ್ನಾಟಕ ವಿಕಲಚೇತನ ಆಯೋಗಿ ದಾಸ್ ಸೂರ್ಯವಂಶಿ ಉದ್ಘಾಟಿಸಿದರು.
ಅಶಕ್ತರಿಗೆ ನೂತನ ತಂತ್ರಜ್ಞಾನದ ಪರಿಚಯವನ್ನು ಮಾಡಿಸುವ ನಿಟ್ಟಿನಲ್ಲಿ ಟೆಕ್‌ಶೇರ್ ಇಂಡಿಯಾ ಸಮಾವೇಶದಲ್ಲಿ ಪಿಡಿಎ, ಮೊಬೈಲ್ ಮುಂತಾದ ನೂತನ ತಂತ್ರಜ್ಞಾನದ ಐಟಿ ಉತ್ಪನ್ನಗಳನ್ನು ಪ್ರದರ್ಶಿಸಲಾಗಿತ್ತು.
ಕರ್ನಾಟಕದ ವಿಕಲಚೇತನ ಆಯೋಗಿ ದಾಸ್ ಸೂರ್ಯವಂಶಿ ಸೇರಿದಂತೆ ಅನೇಕ ಮಂದಿ ಈ ಸಮಾವೇಶದಲ್ಲಿ ಹಾಜರಿದ್ದರು.
|