ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋಗೆ ರಾಜ್ಯದಿಂದ ಆಮಂತ್ರಣವಿಲ್ಲ: ಕರುಣಾನಿಧಿ
ಟಾಟಾ ಮೋಟಾರ್ಸ್ ನ್ಯಾನೋ ಯೋಜನೆಯನ್ನು ತಮಿಳುನಾಡಿನಲ್ಲಿ ಸ್ಥಾಪಿಸುವ ಪ್ರಸ್ತಾಪವನ್ನು ಹೊಂದಿಲ್ಲ ಎಂಬುದಾಗಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಸ್ಪಷ್ಟನೆ ನೀಡಿದ್ದು, ಈ ಮೂಲಕ, ನ್ಯಾನೋ ಯೋಜನೆ ತಮಿಳುನಾಡಿನಲ್ಲಿ ಪ್ರಾರಂಭಗೊಳ್ಳಲಿದೆ ಎಂಬ ಊಹಾಪೋಹಕ್ಕೆ ವಿರಾಮ ಉಂಟಾಗಿದೆ.

ಈ ವಿಷಯದಲ್ಲಿ ಟಾಟಾ ತಮಿಳುನಾಡು ಸರಕಾರಕ್ಕೆ ಮನವಿ ಮಾಡಿಲ್ಲ ಅಥವಾ, ಸರಕಾರವು ಟಾಟಾವನ್ನು ಆಮಂತ್ರಿಸಿಲ್ಲ. ಟಾಟಾ ಯೋಜನೆಯ ಕಾರ್ಯವು ಪಶ್ಚಿಮಬಂಗಾಲದಲ್ಲಿ ನಡೆಯುತ್ತಿರುವಾಗ ತಮಿಳುನಾಡಿನಲ್ಲಿ ಪ್ರಾರಂಭಿಸುವಂತೆ ಆಮಂತ್ರಿಸುವುದು ಸರಿಯಾದ ನಿರ್ಧಾರವಲ್ಲ ಎಂದು ಡಿಎಂಕೆ ಮುಖ್ಯಸ್ಥರು ಹೇಳಿದ್ದಾರೆ.

ಆಮಂತ್ರಣದ ಪ್ರಶ್ನೆಯು ಈಗ ಉಂಟಾಗುವುದಿಲ್ಲ. ಟಾಟಾ ಕೂಡಾ ಸರಕಾರದ ಸಮೀಪಕ್ಕೆ ಬಂದಿಲ್ಲ. ತೃಣಮೂಲ ಕಾಂಗ್ರೆಸ್ ಪಕ್ಷವು ನ್ಯಾನೋ ಯೋಜನೆ ಪಶ್ಚಿಮ ಬಂಗಾಲದಿಂದ ಹೊರಹೋಗಬೇಕೆನ್ನುವ ಬೆದರಿಕೆ ನೀಡಿದ ನಂತರ ಹೆಚ್ಚಿನ ರಾಜ್ಯ ಸರಕಾರಗಳು ಟಾಟಾಗೆ ರತ್ನಕಂಬಳಿ ಹಾಸಿವೆ. ಆದರೆ, ತಮಿಳುನಾಡು ಈ ಕುರಿತಾದ ಯಾವುದೇ ಪ್ರಸ್ತಾಪವನ್ನು ಹೊಂದಿಲ್ಲ ಎಂದು ಕರುಣಾನಿಧಿ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಬೆಂಗಳೂರಿನಲ್ಲಿ ಅಶಕ್ತರಿಗೆ ತಂತ್ರಜ್ಞಾನ ಪರಿಚಯ
ಸಿಂಗೂರ್ ಪ್ರತಿಭಟನಾಕಾರರ ಭೋಜನ ವೆಚ್ಚ 2.5 ಲಕ್ಷ!
ಸಿಂಗೂರ್ ವಿವಾದದಿಂದ ರಾಷ್ಟ್ರದ ಪ್ರತಿಷ್ಠೆಗೆ ಹಾನಿ: ಸಿಐಐ
ಉದ್ಯಮಿ ಕೆ.ಕೆ.ಬಿರ್ಲಾ ನಿಧನ
ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ನ್ಯಾನೋ ನೌಕರರು
ವಿಮಾನ ನಿಲ್ದಾಣಗಳಿಗೆ ಆರ್ಥಿಕ ನಿಯಂತ್ರಣ ಮಂಡಳಿ