ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟಾಟಾ ರಖಂ ಕ್ಷೇತ್ರ ಪ್ರವೇಶ: ಬ್ಯಾನರ್ಜಿ ವಿರೋಧ
ತೃಣಮೂಲ ಕಾಂಗ್ರೆಸ್‌ನ ಟಾಟಾ ವಿರೋಧಿ ಪ್ರತಿಭಟನೆಯು ಏಳದೇ ದಿನಕ್ಕೆ ಕಾಲಿಡುವುದರೊಂದಿಗೆ, ಪಶ್ಚಿಮ ಬಂಗಾಲದಲ್ಲಿ ರಖಂ ಕ್ಷೇತ್ರದತ್ತ ಗಮನಹರಿಸುವ ಟಾಟಾ ನಿರ್ಧಾರವನ್ನು ವಿರೋಧಿಸುವುದಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.

ಒಂದು ವೇಳೆ ಟಾಟಾಗೆ ರಖಂ ಕ್ಷೇತ್ರ ಪ್ರವೇಶಿಲು ಅನುವು ಮಾಡಿಕೊಟ್ಟರೆ, ಇದು ಸಣ್ಣ ವ್ಯಾಪಾರಿಗಳಿಗೆ ನಷ್ಟವನ್ನು ತಂದೊಡ್ಡುತ್ತದೆ. ತೃಣಮೂಲ ಕಾಂಗ್ರೆಸ್ ಇದನ್ನು ಬಲವಾಗಿ ವಿರೋಧಿಸುತ್ತದೆ ಎಂದು ಸಿಂಗೂರ್ ಧರಣಿಯ ವೇಳೆ ಬ್ಯಾನರ್ಜಿ ಹೇಳಿದ್ದಾರೆ.

ಸಣ್ಣ ರಖಂ ವ್ಯಾಪಾರಿಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಸೆಪ್ಟೆಂಬರ್ ಒಂದರಂದು ಸಿಂಗೂರಿನಲ್ಲಿ ರ‌್ಯಾಲಿ ನಡೆಸುವುದಾಗಿ ತಿಳಿಸಿದ ಬ್ಯಾನರ್ಜಿ,ಬ್ರಹತ್ ಉದ್ಯಮಗಳ ಆಗಮನದಿಂದಾಗಿ ಈಗಾಗಲೇ ನಷ್ಟದಲ್ಲಿರುವ ಸಣ್ಣ ವ್ಯಾಪಾರಿಗಳ ಹಿತದೃಷ್ಟಿಯನ್ನು ತೃಣಮೂಲ ಕಾಂಗ್ರೆಸ್ ಗಮನದಲ್ಲಿರಿಸಿದೆ ಎಂದು ಬ್ಯಾನರ್ಜಿ ಸೂಚಿಸಿದರು.
ಮತ್ತಷ್ಟು
ನ್ಯಾನೋಗೆ ರಾಜ್ಯದಿಂದ ಆಮಂತ್ರಣವಿಲ್ಲ: ಕರುಣಾನಿಧಿ
ಬೆಂಗಳೂರಿನಲ್ಲಿ ಅಶಕ್ತರಿಗೆ ತಂತ್ರಜ್ಞಾನ ಪರಿಚಯ
ಸಿಂಗೂರ್ ಪ್ರತಿಭಟನಾಕಾರರ ಭೋಜನ ವೆಚ್ಚ 2.5 ಲಕ್ಷ!
ಸಿಂಗೂರ್ ವಿವಾದದಿಂದ ರಾಷ್ಟ್ರದ ಪ್ರತಿಷ್ಠೆಗೆ ಹಾನಿ: ಸಿಐಐ
ಉದ್ಯಮಿ ಕೆ.ಕೆ.ಬಿರ್ಲಾ ನಿಧನ
ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ನ್ಯಾನೋ ನೌಕರರು