ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಸಂಸ್ಥೆಗಳಿಂದ ಜೆಟ್ ಇಂಧನ ಬೆಲೆ ಕಡಿತ
ಸರಕಾರ ನಿಯಂತ್ರಿತ ತೈಲ ಸಂಸ್ಥೆಗಳು ಜೆಟ್ ಇಂಧನದ ಬೆಲೆಯನ್ನು ಶೇ.16ರಷ್ಟು ಕಡಿತಗೊಳಿಸಿದ್ದು, ಇದು ಮಂಗಳವಾರದಿಂದ ಜಾರಿಗೆ ಬರಲಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾತೈಲ ಬೆಲೆಯ ಇಳಿಕೆಯ ಹಿನ್ನೆಲೆಯಲ್ಲಿ ಎಟಿಎಫ್ ಬೆಲೆಯನ್ನು ಇಳಿಕೆಗೊಳಿಸಲಾಗಿದೆ ಎಂದು ದೇಶದ ಅರ್ಧದಷ್ಟು ಇಂಧನ ಮಾರುಕಟ್ಟೆಯನ್ನು ನಿಯಂತ್ರಿಸುವ ಇಂಡಿಯನ್ ಆಯಿಲ್ ಕಾರ್ಪ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ದೇಶೀಯ ವಿಮಾನಗಳಿಗೆ ಜೆಟ್ ಇಂಧನವನ್ನು ಪ್ರತಿ ಕಿಲೋಲೀಟರ್‌ಗೆ 11784 ರೂ.ಗಳಷ್ಟು ಕಡಿತಗೊಳಿಸಿದ್ದು, ಇದು ಸ್ಥಳೀಯ ತೆರಿಗೆ ಪಾವತಿಗೆ ಅನ್ವಯಿಸುವುದಿಲ್ಲ.

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿನ ನಿರಂತರ ಜೆಟ್ ಇಂಧನ ಬೆಲೆಯ ಏರಿಕೆಯ ನಂತರ, ಎಟಿಎಫ್ ಬೆಲೆಯನ್ನು ತಗ್ಗಿಸಲಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆಗೆ ಅನುಗುಣವಾಗಿ, ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಪ್ರತಿ ತಿಂಗಳಿಗೊಮ್ಮೆ ತೈಲ ಬೆಲೆ ವಿಮರ್ಷೆಯನ್ನು ನಡೆಸುತ್ತದೆ.
ಮತ್ತಷ್ಟು
ಟಾಟಾ ರಖಂ ಕ್ಷೇತ್ರ ಪ್ರವೇಶ: ಬ್ಯಾನರ್ಜಿ ವಿರೋಧ
ನ್ಯಾನೋಗೆ ರಾಜ್ಯದಿಂದ ಆಮಂತ್ರಣವಿಲ್ಲ: ಕರುಣಾನಿಧಿ
ಬೆಂಗಳೂರಿನಲ್ಲಿ ಅಶಕ್ತರಿಗೆ ತಂತ್ರಜ್ಞಾನ ಪರಿಚಯ
ಸಿಂಗೂರ್ ಪ್ರತಿಭಟನಾಕಾರರ ಭೋಜನ ವೆಚ್ಚ 2.5 ಲಕ್ಷ!
ಸಿಂಗೂರ್ ವಿವಾದದಿಂದ ರಾಷ್ಟ್ರದ ಪ್ರತಿಷ್ಠೆಗೆ ಹಾನಿ: ಸಿಐಐ
ಉದ್ಯಮಿ ಕೆ.ಕೆ.ಬಿರ್ಲಾ ನಿಧನ