ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೆನರಾ ಬ್ಯಾಂಕ್‌ನಿಂದ 100 ಹೊಸ ಶಾಖೆಗಳು
ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.20ರಷ್ಟು ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಕೆನರಾ ಬ್ಯಾಂಕ್, ದೇಶದಲ್ಲಿ 100 ಶಾಖೆಗಳನ್ನು ಮತ್ತು ವಿದೇಶದಲ್ಲಿ ಐದು ಶಾಖೆಗಳನ್ನು ಪ್ರಾರಂಭಿಸಲಿದೆ ಎಂದು ಕೆನರಾ ಬ್ಯಾಂಕ್ ಮೂಲಗಳು ತಿಳಿಸಿವೆ.

ಪ್ರಸಕ್ತ ವರ್ಷದಲ್ಲಿ ಹರಿಯಾಣ, ಪಂಜಾಬ್, ಮತ್ತು ಹಿಮಾಚಲ ಪ್ರದೇಶದಲ್ಲಿ 28 ಶಾಖೆಗಳು ಸೇರಿದಂತೆ ದೇಶದಲ್ಲಿ ಒಟ್ಟು 100 ಶಾಖೆಗಳನ್ನು ಬ್ಯಾಂಕ್ ಪ್ರಾರಂಭಿಸಲಿದೆ ಎಂದು ಕೆನರಾ ಬ್ಯಾಂಕ್ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕ ಎ.ಸಿ.ಮಹಾಜನ್ ತಿಳಿಸಿದ್ದಾರೆ.

ಪ್ರಸಕ್ತ ಕೆನರಾ ಬ್ಯಾಂಕ್, 2,694 ಶಾಖೆಗಳನ್ನು ಹೊಂದಿದೆ. ಚೀನಾ ಮತ್ತು ಲಂಡನ್‌ನಲ್ಲಿಯೂ ತನ್ನ ಶಾಖೆಗಳನ್ನು ಹೊಂದಿರುವ ಕೆನರಾ ಬ್ಯಾಂಕ್, ಪ್ರಸಕ್ತ ಹಣಕಾಸು ವರ್ಷದಲ್ಲಿ ಬಹಕೈನ್, ಮಸ್ಕತ್, ಒಮನ್, ಕತಾರ್ ಮತ್ತು ಜೋಹನ್ಸ್‌ಬರ್ಗ್‌ನಲ್ಲಿ ಶಾಖೆ ಪ್ರಾರಂಭಿಸುವ ಯೋಜನೆಯನ್ನು ಹೊಂದಿದೆ.

2008-09ರ ಸಾಲಿನಲ್ಲಿ 3,10,000 ಕೋಟಿ ವ್ಯವಹಾರ ನಡೆಸುವ ಗುರಿಯನ್ನು ಬ್ಯಾಂಕ್ ಹೊಂದಿದ್ದು, 2007-08ರ ಅವಧಿಯಲ್ಲಿ ಬ್ಯಾಂಕ್ 2,61,000 ಕೋಟಿ ವ್ಯವಹಾರ ನಡೆಸುವುದರೊಂದಿಗೆ ಶೇ.20ರಷ್ಟು ಅಭಿವೃದ್ಧಿ ಸಾಧಿಸಿತ್ತು ಎಂದು ಅವರು ತಿಳಿಸಿದ್ದಾರೆ.
ಮತ್ತಷ್ಟು
ತೈಲ ಸಂಸ್ಥೆಗಳಿಂದ ಜೆಟ್ ಇಂಧನ ಬೆಲೆ ಕಡಿತ
ಟಾಟಾ ರಖಂ ಕ್ಷೇತ್ರ ಪ್ರವೇಶ: ಬ್ಯಾನರ್ಜಿ ವಿರೋಧ
ನ್ಯಾನೋಗೆ ರಾಜ್ಯದಿಂದ ಆಮಂತ್ರಣವಿಲ್ಲ: ಕರುಣಾನಿಧಿ
ಬೆಂಗಳೂರಿನಲ್ಲಿ ಅಶಕ್ತರಿಗೆ ತಂತ್ರಜ್ಞಾನ ಪರಿಚಯ
ಸಿಂಗೂರ್ ಪ್ರತಿಭಟನಾಕಾರರ ಭೋಜನ ವೆಚ್ಚ 2.5 ಲಕ್ಷ!
ಸಿಂಗೂರ್ ವಿವಾದದಿಂದ ರಾಷ್ಟ್ರದ ಪ್ರತಿಷ್ಠೆಗೆ ಹಾನಿ: ಸಿಐಐ