ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರ್ ಬಿಕ್ಕಟ್ಟಿನಿಂದ ಅಸ್ಥಿರತೆ: ನಾರಾಯಣ ಮೂರ್ತಿ
ಟಾಟಾ ನ್ಯಾನೋ ಸ್ಥಾವರದ ಕುರಿತಾದ ಬಿಕ್ಕಟ್ಟು, ಹೂಡಿಕೆದಾರರಲ್ಲಿ ಭೀತಿ ಮತ್ತು ಅಸ್ಥಿರತೆಯನ್ನು ಹುಟ್ಟುಹಾಕುವುದರೊಂದಿಗೆ, ದೇಶದ ಜಿಡಿಪಿ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂಬುದಾಗಿ ಸಾಫ್ಟ್‌ವೇರ್ ದೊರೆ ಎನ್.ಆರ್.ನಾರಾಯಣಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ಸಿಂಗೂರಿನಲ್ಲಿ ನಡೆಯುತ್ತಿರುವುದು ಪಶ್ಚಿಮ ಬಂಗಾಲಕ್ಕೆ, ಭಾರತಕ್ಕೆ ಮತ್ತು ಭಾರತದ ಎಲ್ಲಾ ಅಭಿವೃದ್ಧಿಗೆ ದುರದೃಷ್ಟಕರವಾಗಿದೆ ಎಂದು ಇನ್ಫೋಸಿಸ್ ಟೆಕ್ನಾಲಜಿಯ ಪ್ರಮುಖ ಸಲಹಾಗಾರ ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಸಿಂಗೂರಿನಲ್ಲಿನ ಬೆಳವಣಿಗೆಯು ಎಲ್ಲಾ ಭಾರತೀಯ ಮತ್ತು ವಿದೇಶಿ ಹೂಡಿಕೆದಾರರಲ್ಲಿ ಆತಂಕ ಮತ್ತು ಅಸ್ಥಿರತೆಯನ್ನು ಉಂಟುಮಾಡುತ್ತದೆ ಮತ್ತು ಇದು ದೇಶದ ಜಿಡಿಪಿ ಬೆಳವಣಿಗೆಗೆ ತಡೆಯೊಡ್ಡುತ್ತದೆ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.

ಅಲ್ಲದೆ, ಪಶ್ಚಿಮಬಂಗಾಲದ ಯುವಜನಾಂಗಕ್ಕೆ ಉದ್ಯೋಗ ಅವಕಾಶವನ್ನು ಇದು ಕುಂಠಿತಗೊಳಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಮುಂದುವರಿದ ಧರಣಿ: ನ್ಯಾನೋ ಕಾರ್ಯ ಸ್ಥಗಿತ
ಕೆನರಾ ಬ್ಯಾಂಕ್‌ನಿಂದ 100 ಹೊಸ ಶಾಖೆಗಳು
ತೈಲ ಸಂಸ್ಥೆಗಳಿಂದ ಜೆಟ್ ಇಂಧನ ಬೆಲೆ ಕಡಿತ
ಟಾಟಾ ರಖಂ ಕ್ಷೇತ್ರ ಪ್ರವೇಶ: ಬ್ಯಾನರ್ಜಿ ವಿರೋಧ
ನ್ಯಾನೋಗೆ ರಾಜ್ಯದಿಂದ ಆಮಂತ್ರಣವಿಲ್ಲ: ಕರುಣಾನಿಧಿ
ಬೆಂಗಳೂರಿನಲ್ಲಿ ಅಶಕ್ತರಿಗೆ ತಂತ್ರಜ್ಞಾನ ಪರಿಚಯ