ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ಬೆಲೆ ಇಳಿಕೆಯಿಲ್ಲ: ದೇವುರಾ
ಅಂತಾರಾಷ್ಟ್ರೀಯ ತೈಲ ಬೆಲೆಯಲ್ಲಿ ಇಳಿಕೆ ಉಂಟಾಗಿದ್ದರೂ, ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಇನ್ನೂ ಪ್ರತಿದಿನ 400 ಕೋಟಿ ನಷ್ಟವನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ತೈಲ ಬೆಲೆಯಲ್ಲಿ ಯಾವುದೇ ಇಳಿಕೆಯನ್ನು ಸರಕಾರ ನಿರಾಕರಿಸಿದೆ.

ತೈಲ ಕಂಪನಿಗಳ ನಷ್ಟದ ಪ್ರಮಾಣದಲ್ಲಿ ಯಾವುದೇ ಇಳಿಕೆ ಉಂಟಾಗಿರದ ಕಾರಣ, ತೈಲ ಬೆಲೆ ಇಳಿಕೆಗೊಳಿಸುವ ಯಾವುದೇ ನಿರ್ಧಾವನ್ನು ಸರಕಾರವು ಸದ್ಯಕ್ಕೆ ಹೊಂದಿಲ್ಲ ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವುರಾ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯಲ್ಲಿನ ಇಳಿಕೆಯಿಂದಾಗಿ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪನಿಗಳ ಪ್ರತಿದಿನದ ಆದಾಯ ನಷ್ಟದ ಪ್ರಮಾಣವು 450 ಕೋಟಿ ರೂ.ಗಳಿಂದ 400 ಕೋಟಿ ರೂ.ಗಳಿಗೆ ಇಳಿದಿದೆ.

ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಮತ್ತು ಸೀಮಎಎಣ್ಣೆ ಮಾರಾಟದಲ್ಲಿ ತೈಲ ಕಂಪನಿಗಳ ನಷ್ಟವು ಮುಂದುವರಿಯುತ್ತಿದೆ. ಜಾಗತಿಕ ತೈಲ ಬೆಲೆಯಲ್ಲಿನ ಇಳಿಕೆಯು ಇವುಗಳ ಮೇಲೆ ಸಾಕಷ್ಟು ಪರಿಣಾಮ ಬೀರಿಲ್ಲ ಎಂದು ದೇವುರಾ ಸ್ಪಷ್ಟಪಡಿಸಿದ್ದಾರೆ.
ಮತ್ತಷ್ಟು
ಸಿಂಗೂರ್ ಬಿಕ್ಕಟ್ಟಿನಿಂದ ಅಸ್ಥಿರತೆ: ನಾರಾಯಣ ಮೂರ್ತಿ
ಮುಂದುವರಿದ ಧರಣಿ: ನ್ಯಾನೋ ಕಾರ್ಯ ಸ್ಥಗಿತ
ಕೆನರಾ ಬ್ಯಾಂಕ್‌ನಿಂದ 100 ಹೊಸ ಶಾಖೆಗಳು
ತೈಲ ಸಂಸ್ಥೆಗಳಿಂದ ಜೆಟ್ ಇಂಧನ ಬೆಲೆ ಕಡಿತ
ಟಾಟಾ ರಖಂ ಕ್ಷೇತ್ರ ಪ್ರವೇಶ: ಬ್ಯಾನರ್ಜಿ ವಿರೋಧ
ನ್ಯಾನೋಗೆ ರಾಜ್ಯದಿಂದ ಆಮಂತ್ರಣವಿಲ್ಲ: ಕರುಣಾನಿಧಿ