ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಿ.ಸುಬ್ಬರಾವ್ ಆರ್‌ಬಿಐ ನೂತನ ಗವರ್ನರ್
ಹಣಕಾಸು ಕಾರ್ಯದರ್ಶಿ ಡಿ.ಸುಬ್ಬರಾವ್ ಭಾರತೀಯ ರಿಸರ್ವ್ ಬ್ಯಾಂಕಿನ ಮುಂದಿನ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ ಐದರಂದು ಅಧಿಕಾರ ಸ್ವೀಕರಿಸಲಿರುವ ಸುಬ್ಬರಾವ್, ಮುಂದಿನ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಲಿದ್ದಾರೆ.

ಪ್ರಸಕ್ತ ಆರ್‌ಬಿಐ ಗವರ್ನರ್ ವೈ.ವಿ.ರೆಡ್ಡಿ ಈ ವಾರಾಂತ್ಯದಲ್ಲಿ ಅಧಿಕಾರವಧಿಯನ್ನು ಪೂರ್ಣಗೊಳಿಸಲಿದ್ದು, ರೆಡ್ಡಿ ನಂತರದ ಗವರ್ನರ್ ಆಗಿ ಸುಬ್ಬರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಣಕಾಸು ಸಚಿವ ಚಿದಂಬರಂ ಸೋಮವಾರ ಸಂಜೆ ಘೋಷಿಸಿದ್ದಾರೆ.

ಕೆಲವು ಸಮಯಗಳಿಂದಲೇ ಆರ್‌ಬಿಐ ಮುಂದಿನ ಗವರ್ನರ್ ಆಗಿ ಸುಬ್ಬರಾವ್ ಅವರು ಹೆಸರು ಕೇಳಿಬರುತ್ತಿತ್ತು. ನೂತನ ಆರ್‌ಬಿಐ ಗವರ್ನರ್ ನೇಮಕದ ಬಗ್ಗೆ ಚಿದಂಬರಂ ವಿಚಾರ ನಡೆಸುತ್ತಿದ್ದು, ಸೂಕ್ತ ಮಾಹಿತಿಯನ್ನು ಸೂಕ್ತ ಸಮಯದಲ್ಲಿ ಬಹಿರಂಗಗೊಳಿಸುವುದಾಗಿ ಹೇಳುತ್ತಿದ್ದರು.

ಗವರ್ನರ್ ಆಗಿ ತನ್ನ ಅಧಿಕಾರವನ್ನು ಮುಂದುವರಿಸಲು ಪ್ರಸಕ್ತ ಗವರ್ನರ್ ವೈ.ವಿ.ರೆಡ್ಡಿ ಆಸಕ್ತಿ ಹೊಂದಿರದೇ ಇದ್ದು, ಸರಕಾರವು ಈ ಸ್ಥಾನಕ್ಕಾಗಿ ಸೂಕ್ತ ವ್ಯಕ್ತಿಯ ಶೋಧದಲ್ಲಿತ್ತು.

1972ರಲ್ಲಿ ಐಎಎಸ್ ಪಾಸ್ ಮಾಡಿದ್ದ ಸುಬ್ಬರಾವ್ ಆಂಧ್ರಪ್ರದೇಶ ತಂಡದಲ್ಲಿ ನಿಯೋಜಿತಗೊಂಡಿದ್ದರು.

2007ರ ಮೇ ತಿಂಗಳಲ್ಲಿ ಹಣಕಾಸು ಕಾರ್ಯದರ್ಶಿಯಾದಿ ಭಡ್ತಿ ಪಡೆದಿದ್ದು, ಇದಕ್ಕೂ ಮುನ್ನ ಇದೇ ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಏತನ್ಮಧ್ಯೆ, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ್ ರೆಡ್ಡಿ ಆರ್‍‌ಬಿಐ ಗವರ್ನರ್ ಆಗಿ ಆಯ್ಕೆಗೊಂಡ ಕೇಂದ್ರ ಹಣಕಾಸು ಕಾರ್ಯದರ್ಶಿ ಸುಬ್ಬರಾವ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮತ್ತಷ್ಟು
ತೈಲ ಬೆಲೆ ಇಳಿಕೆಯಿಲ್ಲ: ದೇವುರಾ
ಸಿಂಗೂರ್ ಬಿಕ್ಕಟ್ಟಿನಿಂದ ಅಸ್ಥಿರತೆ: ನಾರಾಯಣ ಮೂರ್ತಿ
ಮುಂದುವರಿದ ಧರಣಿ: ನ್ಯಾನೋ ಕಾರ್ಯ ಸ್ಥಗಿತ
ಕೆನರಾ ಬ್ಯಾಂಕ್‌ನಿಂದ 100 ಹೊಸ ಶಾಖೆಗಳು
ತೈಲ ಸಂಸ್ಥೆಗಳಿಂದ ಜೆಟ್ ಇಂಧನ ಬೆಲೆ ಕಡಿತ
ಟಾಟಾ ರಖಂ ಕ್ಷೇತ್ರ ಪ್ರವೇಶ: ಬ್ಯಾನರ್ಜಿ ವಿರೋಧ