ವಿಶ್ವ ಪ್ರಸಿದ್ಧ ಶೂ ಕಂಪನಿ ಬಾಟಾದ ಮಾಲಿಕ ಥೋಮಸ್ ಬಾಟಾ ಟೊರೊಂಟೋದಲ್ಲಿ ಸೋಮವಾರ ನಿಧನರಾದರು. ಅವರಿಗೆ 93 ವರ್ಷ ವಯಸ್ಸಾಗಿತ್ತು.
ಬಾಟಾ ಅವರು ಟೊರೊಂಟೋದ ಸನ್ನಿಬ್ರೂಕ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ಟೊರೊಂಟೋ ಮೂಲದ ಬಾಟಾ ಶೂ ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ 5,000ಕ್ಕಿಂತಲೂ ಹೆಚ್ಚು ರಖಂ ಮಳಿಗೆಗಳನ್ನು ಹೊಂದಿರುವ ಬಾಟಾ ಕಂಪನಿಯ ಉಸ್ತುವಾರಿಯನ್ನು ಪ್ರಸಕ್ತ ಬಾಟಾ ಅವರ ಪುತ್ರ ಥೋಮಸ್ ಜಾರ್ಜ್ ಬಾಟಾ ವಹಿಸಿಕೊಂಡಿದ್ದಾರೆ.
ಹಲವಾರು ರಾಷ್ಟ್ರಗಳ 40 ಉತ್ಪಾದನಾ ಕೇಂದ್ರಗಳಲ್ಲಿ ಬಾಟಾವು 40,000 ನೌಕರರನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.
ಬಾಟಾ ಅವರ ಚಮ್ಮಾರ ತಂದೆ ಥೋಮಸ್ ಬಾಟಾ ತನ್ನ ಶೂ ನಿರ್ಮಾಣ ನಿರ್ವಹಣೆಯನ್ನು ಬಾಟಾ ಹೆಸರಿನಡಿಯಲ್ಲಿ ಝಿನ್ ನಗರದಲ್ಲಿ 1894ರಲ್ಲಿ ಪ್ರಾರಂಭಿಸಿದ್ದರು. ನಂತರ, ತನ್ನ ಸಣ್ಣ ಶೂ ನಿರ್ಮಾಣ ಕೇಂದ್ರವನ್ನು ಬೃಹತ್ ಶೂ ನಿರ್ಮಾಣ ಕಂಪನಿಯಾಗಿ ಬೆಳೆಸುವಲ್ಲಿ ಯಶಸ್ವಿಯಾದ ಥೋಮಸ್, 1932ರಲ್ಲಿ ವಿಮಾನ ಅಪಘಾತದಲ್ಲಿ ಮೃತರಾಗುವ ಮುನ್ನ ಬಾಟಾ ಶೂ ಸಂಸ್ಥೆಯನ್ನು ಪ್ರಾರಂಭಿಸಿದ್ದರು.
|