ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿಯಿಂದ ಅಗ್ಗದ ಕಾರು ನಿರ್ಮಾಣವಿಲ್ಲ
ಭಾರತದ ಕಾರು ನಿರ್ಮಾಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ಸಣ್ಣ ಕಾರುಗಳ ಇಂಧನ ದಕ್ಷತೆ, ಬಹು ಇಂಧನ ಕಾರುಗಳು ಮತ್ತು ವಿದ್ಯುತ್ ಕಾರುಗಳ ಪ್ರಾರಂಭದತ್ತ ದೃಷ್ಟಿ ಹಾಯಿಸುತ್ತಿದ್ದು, ಅಗ್ಗದ ಕಾರು ನಿರ್ಮಿಸುವ ಯೋಜನೆಯನ್ನು ಹೊಂದಿಲ್ಲ ಎಂದು ತಿಳಿಸಿದೆ.

ಮಾರುತಿಯಲ್ಲಿ ಶೇ.54.2ರಷ್ಟು ಪಾಲನ್ನು ಹೊಂದಿರುವ ಜಪಾನಿನ ಮಾರುತಿ ಸುಜುಕಿ ಮೋಟಾರ್ ಕಾರ್ಪ್, ತನ್ನ ಬೃಹತ್ ಸಂಶೋಧನೆಗಳನ್ನು ಮತ್ತು 1200 ಸಿಸಿ ಇಂಧನ ಸಾಮರ್ಥ್ಯದ ಕಾರುಗಳ ಅಭಿವೃದ್ಧಿಯನ್ನು ಭಾರತಕ್ಕೆ ಸ್ಥಳಾಂತರಿಸಲು ಯೋಜನೆ ನಡೆಸಿದೆ.

ಪ್ರಸಕ್ತ, ಶೇ.60-70ರಷ್ಟು ಭಾಗವು ಜಪಾನಿನಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು, ಶೇ.90ರಷ್ಟು ಭಾಗವು ಭಾರತದಲ್ಲಿ ಅಭಿವೃದ್ಧಿಗೊಳ್ಳಲು ಜಪಾನ್ ಬಯಸುತ್ತದೆ ಎಂದು ಮಾರುತಿ ಸುಜುಕಿ ಇಂಡಿಯಾದ ಮುಖ್ಯಸ್ಥ ಆರ್.ಸಿ.ಭಾರ್ಗವ್ ತಿಳಿಸಿದ್ದಾರೆ.

ಆಲ್ಟೋ, ಸ್ವಿಫ್ಟ್ ಮುಂತಾದ ಮಾಡೆಲ್‌ಗಳ ಮೂಲಕ ಭಾರತೀಯ ಕಾರು ಮಾರುಕಟ್ಟೆಯ ಅರ್ಧದಷ್ಟು ಪಾಲನ್ನು ಆಕ್ರಮಿಸಿರುವ ಮಾರುತಿ ಸುಜುಕಿ, ಡಿಸೈರ್‌ನಂತಹ ಆಧುನಿಕ ಮಾಡೆಲ್‌ಗಳ ಮೂಲಕ ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿದೆ.

2007-08ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಮಾರುತಿ ಭಾರತದಲ್ಲಿ 711,818 ಕಾರುಗಳನ್ನು ಮಾರಾಟ ಮಾಡಿದ್ದು, 2010-11ರ ವೇಳೆಗೆ ಒಂದು ಮಿಲಿಯನ್ ದೇಶೀಯ ಮಾರಾಟ ಮತ್ತು 200,000 ಕಾರುಗಳ ರಫ್ತು ಗುರಿಯನ್ನು ಮಾರುತಿ ಹೊಂದಿದೆ.
ಮತ್ತಷ್ಟು
ಗೂಗಲ್‌ನಿಂದ ನೂತನ ವೆಬ್‌ಬ್ರೌಸರ್
ಬಾಟಾ ಶೂ ಮಾಲಿಕ ಥೋಮಸ್ ಬಾಟಾ ನಿಧನ
ಇನ್ನು ಟಾಪ್ಅಪ್ ಮೇಲೆ ಫುಲ್ ಟಾಕ್‌ಟೈಂ
ಡಿ.ಸುಬ್ಬರಾವ್ ಆರ್‌ಬಿಐ ನೂತನ ಗವರ್ನರ್
ತೈಲ ಬೆಲೆ ಇಳಿಕೆಯಿಲ್ಲ: ದೇವುರಾ
ಸಿಂಗೂರ್ ಬಿಕ್ಕಟ್ಟಿನಿಂದ ಅಸ್ಥಿರತೆ: ನಾರಾಯಣ ಮೂರ್ತಿ