ಅತ್ಯಧಿಕ ಸಂಖ್ಯೆಯಲ್ಲಿ ನೆಟ್ವರ್ಕರ್‌ಗಳನ್ನು ಹೊಂದಿದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದ್ದು, ಭಾರತೀಯ ನೆಟ್ವರ್ಕರ್‌ಗಳು ಅತ್ಯಂತ ಸಮರ್ಥರು ಎಂದು ಬಿಜಿನೆಸ್ ನೆಟ್ವರ್ಕಿಂಗ್ ಪೋರ್ಟಲ್ ಝಾಬಿಝ್ ಡಾಟ್ ಕಾಂ ಸ್ಥಾಪಕ ಮತ್ತು ಸಿಇಒ, ಜರ್ಮನ್ ಉದ್ಯಮಿ ಮೈಕೆಲ್ ಬ್ರೆಚ್ಟ್ ಹೇಳಿದರು.
ಝಾಬಿಝ್ ಡಾಟ್ ಕಾಂ ಇತ್ತೀಚೆಗೆ ಭಾರತದಲ್ಲಿ ನೆಟ್ವರ್ಕಿಂಗ್ ಯಾವ ಮಟ್ಟಕ್ಕೆ ಬೆಳೆದಿದೆ ಎಂಬುದನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದ ಬಳಿಕ ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು.
ಇಲ್ಲಿ ಸಾಕಷ್ಟು ಅವಕಾಶಗಳಿರುವುದರಿಂದ ಝಾಬಿಝ್, ಭಾರತೀಯ ಮಾರುಕಟ್ಟೆಗೆ ಇಳಿದಿದೆ. ಈ ವೇದಿಕೆಯು ಜನರಿಗೆ ಸಂಪರ್ಕದ ಸಾಧನವಾಗಿ ಮತ್ತು ವ್ಯಾವಹಾರಿಕ ಸಮಸ್ಯೆಗಳಿಗೆ ತ್ವರಿತ ಪರಿಹಾರಗಳನ್ನು ಒದಗಿಸುತ್ತದೆ ಎಂದು ಅವರು ನುಡಿದರು.
ವಿಚಾರ ಸಂಕಿರಣದಲ್ಲಿ ಮಾತನಾಡಿದ ಬಿಎನ್ಐ ನಿರ್ದೇಶಕ ನೀರಜ್ ಆರ್. ಶಾ ಅವರು, ಇಂದು ನೆಟ್ವರ್ಕಿಂಗ್ ಎಂಬುದು ಸ್ಪರ್ಧೆಯಿಂದ ಸಹಯೋಗದತ್ತ ಅಚ್ಚರಿಯ ರೀತಿಯಲ್ಲಿ ಹೊರಳುತ್ತಿದೆ. ನೆಟ್ವರ್ಕಿಂಗ್ ಎಂಬುದು ನೀವು ಹಿಂದೆಂದೂ ಯೋಚಿಸಿರದಂತಹ ಸಾಧ್ಯತೆಗಳಿಗೆ ಅವಕಾಶ ಒದಗಿಸುತ್ತಿದೆ. ಸಂಪರ್ಕದ ವೆಚ್ಚವು ಕೂಡ ಗಣನೀಯವಾಗಿ ಕಡಿಮೆಯಾಗಿರುವುದರಿಂದ ಸಂಪರ್ಕ ತಂತ್ರಜ್ಞಾನ ಹಿಂದೆಂದಿಗಿಂತ ಸುಲಭವಾಗಿದೆ. ಉದ್ಯಮ-ಉದ್ಯಮಗಳ ನಡುವೆ ಸಹಯೋಗ ಮಾತ್ರವೇ ಅಲ್ಲದೆ, ಉದ್ಯಮದೊಳಗೆಯೇ ಸಹಯೋಗ ವ್ಯವಸ್ಥೆಯು ಈ ನೆಟ್ವರ್ಕಿಂಗ್ ಯುಗದ ವಿಶೇಷತೆ. ಇದರಲ್ಲಿ ಉತ್ತಮ ಉದ್ಯೋಗಾವಕಾಶಗಳೂ ಇವೆ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ನೆಟ್ವರ್ಕಿಂಗ್ ಅರಿವು ಮೂಡಿಸುವುದರ ಪ್ರಾಮುಖ್ಯತೆ ಬಗ್ಗೆ ವಿವರಿಸಿದ ಐಟಿ ಆಂಡ್ ಬಿಜಿನೆಸ್ ಡಿಸೈನ್ ಕಾಲೇಜಿನ ಡೀನ್ ಪ್ರೊ.ಪ್ರದೀಪ್ ಪೆಂಡ್ಸೆ, ನಿಮಗೇನು ಗೊತ್ತಿದೆ ಎನ್ನುವುದಕ್ಕಿಂತಲೂ ನಿಮಗೆ ಯಾರು ಗೊತ್ತಿದ್ದಾರೆ ಎಂಬುದು ಮುಖ್ಯವಾಗುತ್ತದೆ. ಹೀಗಾಗಿ, ಇದನ್ನು ತಿಳಿಸಬಲ್ಲ ಸಂಪರ್ಕ ಕ್ರಾಂತಿಯು ಸಾಧ್ಯವಾಗುವುದು ನೆಟ್ವರ್ಕಿಂಗ್‌ನಿಂದ. ನೀವು ಬಯಸಿದ ಉದ್ಯೋಗ ಹುಡುಕಲು ಮತ್ತು ಪಡೆಯಲು ನೆಟ್ವರ್ಕಿಂಗ್ ಎಂಬುದು ಅತ್ಯಂತ ಪ್ರಧಾನ ವಿಷಯ ಎಂದರು.
ಝಾಬಿಝ್ ಇಂಡಿಯಾವು ಭಾರತವನ್ನು ನೆಟ್ವರ್ಕಿಂಗ್ ತಾಣವಾಗಿ ರೂಪಿಸುವುದರತ್ತ ಕಾರ್ಯನಿರತವಾಗಿದೆ. ಈ ವಿಚಾರ ಸಂಕಿರಣವು ನೆಟ್ವರ್ಕಿಂಗ್ ಪ್ರಾಮುಖ್ಯತೆಯ ಕುರಿತಾದ ಆಸಕ್ತಿಕರ ಅಂಶಗಳ ಮೇಲೆ ಬೆಳಕು ಚೆಲ್ಲಿತು. 'ನಮ್ಮ ಅನುಭವದ ಪ್ರಕಾರ ಹೇಳುವುದಾದರೆ, ಭಾರತೀಯರು ಅತ್ಯುತ್ತಮ ನೆಟ್ವರ್ಕರ್‌ಗಳಾಗಿದ್ದು, ಅತ್ಯಂತ ಸಮರ್ಥವಾಗಿ ನೆಟ್ವರ್ಕ್‌ಗಳನ್ನು ಬಳಸುವವರೂ ಆಗಿದ್ದಾರೆ' ಎಂದು ಮೈಕೆಲ್ ಬ್ರೆಚ್ಟ್ ಅಭಿಪ್ರಾಯಪಟ್ಟಿದ್ದಾರೆ.
|