ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋಗೆ ಮಧ್ಯಪ್ರದೇಶಕ್ಕೆ ಆಹ್ವಾನ: ಕಮಲನಾಥ್
ಒಂದು ಲಕ್ಷ ರೂಪಾಯಿಯ ನ್ಯಾನೋ ಕಾರು ಸ್ಥಾವರವನ್ನು ಮಧ್ಯಪ್ರದೇಶದಲ್ಲಿ ಪ್ರಾರಂಭಿಸಲು ಟಾಟಾ ಮೋಟಾರ್ಸ್ ಸಮೂಹದ ಮುಖ್ಯಸ್ಥ ರತನ್ ಟಾಟಾ ಅವರಿಗೆ ಉದ್ಯಮ ಸಚಿವ ಕಮಲನಾಥ್ ಆಹ್ವಾನ ನೀಡಿದ್ದಾರೆ. ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಮಧ್ಯಪ್ರದೇಶಕ್ಕೆ ಟಾಟಾವನ್ನು ಅಹ್ವಾನಿಸುತ್ತವೆ ಎಂದು ಅವರು ಹೇಳಿದ್ದಾರೆ.

ಈ ವಿಚಾರದ ಕುರಿತಾಗಿ ನಾಲ್ಕು ದಿನಗಳ ಹಿಂದೆ ರತನ್ ಟಾಟಾ ಅವರೊಂದಿಗೆ ಮಾತುಕತೆ ನಡೆಸಿದ್ದು, ಮಧ್ಯಪ್ರದೇಶಕ್ಕೆ ಟಾಟಾ ಮೋಟಾರ್ಸ್ ಯೋಜನೆಯನ್ನು ಆಮಂತ್ರಿಸಿದ್ದೇನೆ. ಎಲ್ಲಾ ರಾಜಕೀಯ ಪಕ್ಷಗಳು ಇದಕ್ಕೆ ಸಮ್ಮತಿ ಸೂಚಿಸುತ್ತವೆ ಎಂಬ ನಂಬಿಕೆ ಇದೆ ಎಂದು ಕಮಲನಾಥ್ ತಿಳಿಸಿದ್ದಾರೆ.

ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ, ಕಮಲನಾಥ್ ಅವರು, ಚಿಂದ್ವಾರದ ಲೋಕಸಭಾ ಕ್ಷೇತ್ರವನ್ನು ಎರಡು ವರ್ಷಗಳಿಂದ ಪ್ರತಿನಿಧಿಸುತ್ತಿದ್ದಾರೆ.

ಪಶ್ಚಿಮ ಬಂಗಾಲ ಸರಕಾರ ಬಯಸಿದ್ದಲ್ಲಿ ಸಿಂಗೂರ್ ವಿವಾದವನ್ನು ಪರಿಹರಿಸಲು ಕೇಂದ್ರವು ಮಧ್ಯಪ್ರವೇಶಿಸಲು ಸಿದ್ಧವಾಗಿದೆ ಎಂದು ಈ ಮೊದಲು ಕಮಲನಾಥ್ ಸೂಚಿಸಿದ್ದರು.

ತೃಣಮೂಲ ಕಾಂಗ್ರೆಸ್ ಪಕ್ಷದ ವಿರೋಧದ ಹಿನ್ನೆಲೆಯಲ್ಲಿ, ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಗೊಳ್ಳಲು ನಿಗದಿಯಾಗಿದ್ದ ನ್ಯಾನೋ ಕಾರು ನಿರ್ಮಾಣ ಕಾರ್ಯವನ್ನು ಟಾಟಾ ಮೋಟಾರ್ಸ್ ಮಂಗಳವಾರ ಸ್ಥಗಿತಗೊಳಿಸಿದೆ.
ಮತ್ತಷ್ಟು
ಭಾರತದಿಂದ ಜೀರಿಗೆ ರಫ್ತು ಮೂರು ಪಟ್ಟು ಹೆಚ್ಚಳ
'ನೆಟ್ವರ್ಕಿಂಗ್‌ನಲ್ಲಿ ಭಾರತೀಯರೇ ಹೆಚ್ಚು ಸಮರ್ಥರು'
ಮಾರುತಿಯಿಂದ ಅಗ್ಗದ ಕಾರು ನಿರ್ಮಾಣವಿಲ್ಲ
ಗೂಗಲ್‌ನಿಂದ ನೂತನ ವೆಬ್‌ಬ್ರೌಸರ್
ಬಾಟಾ ಶೂ ಮಾಲಿಕ ಥೋಮಸ್ ಬಾಟಾ ನಿಧನ
ಇನ್ನು ಟಾಪ್ಅಪ್ ಮೇಲೆ ಫುಲ್ ಟಾಕ್‌ಟೈಂ