ಆಪಲ್ ಇಂಕ್, ತನ್ನ ಐಪಾಡ್ ಮ್ಯೂಸಿಕ್ ಪ್ಲೇಯರನ್ನು ಕಡಿಮೆ ಬೆಲೆಯಲ್ಲಿ ಮುಂದಿನ ಮಂಗಳವಾರ ಮಾಧ್ಯಮ ಸಮಾರಂಭದಲ್ಲಿ ಅನಾವರಣಗೊಳಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಬಹುನಿರೀಕ್ಷಿತ ಮೆಕ್‌ಬುಕ್ ಲ್ಯಾಪ್‌ಟಾಪ್ ಕಂಪ್ಯೂಟರನ್ನು ಸದ್ಯಕ್ಕೆ ಬಿಡುಗಡೆಗೊಳಿಸುವುದಿಲ್ಲ ಎಂದು ಆಪಲ್ ಹೇಳಿದೆ.
ಐಪಾಡ್ ಕೇಳುತ್ತಾ ಗಾಳಿಯಲ್ಲಿ ಹಾರುತ್ತಿರುವ ವ್ಯಕ್ತಿಯ ಚಿತ್ರವನ್ನು ಹೊಂದಿರುವ ಲೆಟ್ಸ್‌ರಾಕ್ ಎಂಬ ಸೆಪ್ಟೆಂಬರ್ ಒಂಬತ್ತರ ಸಮಾರಂಭದಲ್ಲಿ ಇದನ್ನು ಅನಾವರಣಗೊಳಿಸುವುದಾಗಿ ಆಪಲ್ ಮಾಧ್ಯಮಗಳಿಗೆ ಕಳುಹಿಸಿರುವ ಇಮೇಲ್ ಆಮಂತ್ರಣದಲ್ಲಿ ತಿಳಿಸಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ದೊರಕಿಲ್ಲವಾದರೂ, ವಿಶಿಷ್ಟ ಆಮಂತ್ರಣದ ಮೂಲಕ ಏರ್ಪಡಿಸಲಾಗಿರುವ ಸಮಾರಂಭದಲ್ಲಿ ನೂತನ ಉತ್ಪನ್ನಗಳನ್ನು ಘೋಷಿಸಲಾಗುತ್ತದೆ.
ಮುಂದಿನ ತಿಂಗಳಲ್ಲಿ ಕೆಲವು ನೂತನ ಉತ್ಪನ್ನಗಳನ್ನು ಬಿಡುಗಡೆಗೊಳಿಸುವಲ್ಲಿ ಕಂಪನಿಯು ಕಾರ್ಯನಿರ್ವಹಿಸುತ್ತಿದೆ ಎಂದು ಆಪಲ್ ಮುಖ್ಯಸ್ಥ ಸ್ಟೀವ್ ಜಾಬ್ಸ್ ಜುಲೈ ತಿಂಗಳಲ್ಲಿ ಘೋಷಿಸಿದ್ದರು.
ಇಂಟರ್ನೆಟ್ ರೆಡಿ ಐಪಾಡ್ ಪ್ರಾರಂಭಿಕ ಬೆಲೆಯು ಅಮೆರಿಕದಲ್ಲಿ 299 ಡಾಲರ್ ಆಗಿದ್ದು, ಐಫೋನ್ ಬೆಲೆಯು 199 ಡಾಲರ್ ಆಗಿದೆ. ಆಪಲ್ ಐಪಾಡ್ ಮತ್ತು ಐಪಾಡ್ ಟಚ್ ಮಾಡೆಲ್ ಬೆಲೆಯು ಇಳಿಕೆಗೊಳ್ಳಬೇಕಾದ ಅಗತ್ಯವಿದೆ ಎಂದು ಅಮೆರಿಕನ್ ತಂತ್ರಜ್ಞಾನ ಸಂಶೋಧನಾ ವಿಶ್ಲೇಷಕರು ಹೇಳಿದ್ದಾರೆ.
|