ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಾಲು ಪರಿಶುದ್ಧತೆ ಪತ್ತೆಗೆ ನೂತನ ವಿಧಾನ
ಕೇವಲ ಐವತ್ತು ಪೈಸೆಯ ವೆಚ್ಚದಲ್ಲಿ ಸಾಮಾನ್ಯ ವಿಧಾನದ ಮೂಲಕ ಮನೆಯಲ್ಲಿಯೇ ಐದು ನಿಮಿಷದೊಳಗೆ ಹಾಲಿನ ಪರಿಶುದ್ಧತೆಯನ್ನು ಈಗ ಪತ್ತೆ ಹಚ್ಚಬಹುದಾಗಿದೆ.

ಹಿಸ್ಸಾರ್‌ನ ಗುರು ಜಾಂಬೇಶ್ವರ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಯೊಬ್ಪರು ಯೂರಿಯಾ ಮತ್ತು ಇತರ ರಾಸಾಯನಿಕಗಳ ಬಳಕೆಯಿಂದ ಹಾಲಿನ ಪರಿಶುದ್ಧತೆಯನ್ನು ಪತ್ತೆಹಚ್ಚುವ ನೂತವ ವಿಧಾನವೊಂದನ್ನು ಅಭಿವೃದ್ಧಿಗೊಳಿಸಿದ್ದಾರೆ.

ಸಂಶೋಧನಾ ವಿಭಾಗದ ಮುಖ್ಯಸ್ಥ ಬಿ.ಎಸ್.ಕಾಟ್ಕರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ದೀಪಕ್, ಈ ನೂತನ ವಿಧಾನವನ್ನು ಅಭಿವೃದ್ಧಿಗೊಳಿಸಿದ್ದು, ಇದರ ಮೂಲಕ, ಇನ್ನೊಂದು ಅಗ್ಗದ ರಾಸಾಯನಿಕದ ಮೂಲಕ ಹಾಲಿನ ಗುಣಮಟ್ಟವನ್ನು ಪತ್ತೆ ಹಚ್ಚಬಹುದು. ಆಸಿಡ್ ಸುರಿದ ವೇಳೆ ಹಾಲಿನ ಬಣ್ಣವು ಗುಲಾಬಿ ಬಣ್ಣಕ್ಕೆ ತಿರುಗಿದಲ್ಲಿ ಇದು ಕೃತಕ ಹಾಲೆಂದು ಪರಿಗಣಿಸಬಹುದಾಗಿದೆ.

ಈ ವಿಧಾನದಲ್ಲಿ ಬಳಸುವ ಆಸಿಡ್ ಮತ್ತು ರಾಸಾಯನಿಕಗಳು ಯಾವುದೇ ಬಾಧಕವನ್ನು ಹೊಂದಿಲ್ಲ ಮತ್ತು ಅಶುದ್ಧ ಹಾಲನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಈ ವಿಧಾನವನ್ನು ವಿವರಿಸುವ ವೇಳೆ ಡಾ.ಕಾಟ್ಕರ್ ಹೇಳಿದ್ದಾರೆ.

ಈ ವಿಧಾನದ ಪೇಟೆಂಟ್‌ಗೆ ವಿಭಾಗವು ಅರ್ಜಿ ಸಲ್ಲಿಸಿದ್ದು, ಪೇಟೆಂಟ್ ದೊರೆತ ನಂತರ, ಸಾಮಾನ್ಯ ಜನರ ಬಳಕೆಗಾಗಿ ಈ ವಿಧಾನವನ್ನು ಬಿಡುಗಡೆಗೊಳಿಸಲಾಗುವುದು ಎಂದು ಕಾಟ್ಕರ್ ತಿಳಿಸಿದ್ದಾರೆ.
ಮತ್ತಷ್ಟು
ಆಪಲ್‌ನಿಂದ ಕಡಿಮೆಬೆಲೆಗೆ ಐಪಾಡ್ ಬಿಡುಗಡೆ ನಿರೀಕ್ಷೆ
ನ್ಯಾನೋಗೆ ಮಧ್ಯಪ್ರದೇಶಕ್ಕೆ ಆಹ್ವಾನ: ಕಮಲನಾಥ್
ಭಾರತದಿಂದ ಜೀರಿಗೆ ರಫ್ತು ಮೂರು ಪಟ್ಟು ಹೆಚ್ಚಳ
'ನೆಟ್ವರ್ಕಿಂಗ್‌ನಲ್ಲಿ ಭಾರತೀಯರೇ ಹೆಚ್ಚು ಸಮರ್ಥರು'
ಮಾರುತಿಯಿಂದ ಅಗ್ಗದ ಕಾರು ನಿರ್ಮಾಣವಿಲ್ಲ
ಗೂಗಲ್‌ನಿಂದ ನೂತನ ವೆಬ್‌ಬ್ರೌಸರ್