ಟಾಟಾ ಮೋಟಾರ್ಸ್ ಕುರಿತಂತೆ ಸಿಂಗೂರಿನಲ್ಲಿ ಬಿಕ್ಕಟ್ಟು ಇನ್ನೂ ಮುಂದುವರಿದಿದ್ದರೂ, ಭಾರತವು ನ್ಯಾನೋದಂತಹ ಅನೇಕ ಸಾಧನೆಗಳ ಹೊಸ್ತಿಲಲ್ಲಿದ್ದು, ಭಾರತಕ್ಕೆ ವ್ಯವಸ್ಥಿತ ನಾಯಕತ್ವದ ಅಗತ್ಯವಿದೆ ಎಂದು ಕೇಂದ್ರವು ಅಭಿಪ್ರಾಯಪಟ್ಟಿದೆ.
ಭವಿಷ್ಯದ ಸವಾಲನ್ನು ಎದುರಿಸುವ ನಿಟ್ಟಿನಲ್ಲಿ, ಆಟೋಮೊಬೈಲ್ ಕಂಪನಿಗಳು ನಿರ್ವಹಣೆಗೆ ಉತ್ತಮ ಪ್ರತಿಭೆಯ ನಾಯಕರನ್ನು ಆಯ್ಕೆ ಮಾಡಿಕೊಳ್ಳುವುದರೊಂದಿಗೆ, ಭವಿಷ್ಯದ ವ್ಯವಸ್ಥಿತ ನಿರ್ವಹಣೆಗೆ ನಾಯಕರನ್ನೂ ಕಂಡುಕೊಳ್ಳಬೇಕು ಎಂದು ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಸಂಸ್ಥೆಗಳ ಸಚಿವ ಸಂತೋಷ್ ಮೋಹನ್ ದೇವ್ ತಿಳಿಸಿದ್ದಾರೆ.
ಭಾರತವು ನ್ಯಾನೋದಂತಹ ಸಾಧನೆಗಳ ಹೊಸ್ತಿಲಲ್ಲಿರುವುದಾಗಿ ಹೇಳಿದ ಅವರು, ವಿಶ್ವದ ಅತಿ ಅಗ್ಗದ ಕಾರು ನ್ಯಾನೋವನ್ನು ಬೆಳಕಿಗೆ ತರುವ ರತನ್ ಟಾಟಾ ಅವರ ದೂರದೃಷ್ಟಿಯನ್ನು ಶ್ಲಾಘಿಸಿದರು.
ಇದು ಭಾರತದ ಕೌಶಲ್ಯ ಸಾಮರ್ಥ್ಯವನ್ನು ಸಾಬೀತುಪಡಿಸುವುದರೊಂದಿಗೆ, ಭಾರತದ ಮಿತವ್ಯಯ ಇಂಜಿನಿಯರಿಂಗ್ ಅರ್ಹತೆಯನ್ನೂ ಪ್ರಾಮಾಣೀಕರಿಸಿದೆ. ಅಲ್ಲದೆ, ಜಾಗೂರ್ ಲ್ಯಾಂಡ್ ರೋವರ್‌ನ್ನು ಸ್ವಾಧೀನಪಡಿಸುವ ಮೂಲಕ ಟಾಟಾ ಸಮೂಹವು ಜಾಗತಿಕ ವೇದಿಕೆಯಲ್ಲಿ ತಮ್ಮ ನಾಯಕತ್ವವನ್ನು ಪ್ರದರ್ಶಿಸಿದೆ ಎಂದು ದೇವ್ ಹೇಳಿದರು.
ಗಗನಕ್ಕೇರುತ್ತಿರುವ ತೈಲ ಬೆಲೆಯು ಆಟೋಮೊಬೈಲ್ ಉದ್ಯಮಗಳಿಗೆ ಆತಂಕಕಾರಿಯಾಗುತ್ತಿರುವುದರೊಂದಿಗೆ, ಹೈಬ್ರಿಡ್‌ನಂತಹ ಪರ್ಯಾಯ ಇಂಧನವನ್ನು ನೀಡಲು ಸರಕಾರವು ಸಹಕರಿಸುವುದಾಗಿ ದೇವ್ ಇದೇ ವೇಳೆ ಭರವಸೆ ನೀಡಿದರು.
|