ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಂಗಾಳದ ಪ್ರತಿಷ್ಠೆಗೆ 'ಟಾಟಾ': 80,000 ಕೋ.ನಷ್ಟ
ಟಾಟಾ ಯೋಜನೆಯು ಪಶ್ಚಿಮ ಬಂಗಾಳದಿಂದ ಹೊರಹೋಗಲು ನಿರ್ಧಾರ ಮಾಡಿರುವುದು, ಪಶ್ಚಿಮ ಬಂಗಾಳದ ಪ್ರತಿಷ್ಠೆಗೆ ಧಕ್ಕೆಯುಂಟು ಮಾಡುವುದರೊಂದಿಗೆ ಸುಮಾರು 80,000 ಕೋಟಿ ರೂಪಾಯಿ ನಷ್ಟವನ್ನು ತಂದೊಡ್ಡಲಿದೆ.

ಟಾಟಾ ಯೋಜನೆ ಹೊರಹೋದ ತಕ್ಷಣದ ನಷ್ಟವು 5,000 ಕೋಟಿ ರೂಪಾಯಿಗಳಾಗಿದ್ದು, ಇದರಲ್ಲಿ ಸಿಂಗೂರಿನ ಪೂರಕ ಕೇಂದ್ರದ ಬಂಡವಾಳವೂ ಸೇರಿದೆ. ಇದರೊಂದಿಗೆ, ಟಾಟಾ ಸ್ಥಾವರ ಹೊರಹೋದಲ್ಲಿ ಎರಡನೇ ಹಂತದ ವಹಿವಾಟುದಾರರು ಕೂಡಾ ನಷ್ಟಕ್ಕೊಳಗಾಗುತ್ತಾರೆ.

ಟಾಟಾದ ನಿರ್ಧಾರದಿಂದ ಬೃಹತ್ ಹೂಡಿಕೆದಾರರ ಆತಂಕದ ಹೊರತಾಗಿಯೂ, ಟಾಟಾ ಬ್ರಾಂಡ್‌ಗಳಾದ ಟಾಟಾ ರಿಯಾಲಿಟಿ ಇನ್ಫ್ರಾಸ್ಟ್ರಕ್ಚರ್, ಟಾಟಾ ಮೆಟಲಿಕ್ ಆಂಡ್ ಮೇಥನ್ ಪವರ್ ಲಿಮಿಟೆಡ್‌ಗಳೂ ರಾಜ್ಯದಿಂದ ಹೊರಹೋಗಲಿದ್ದು, ಇದು ಸುಮಾರು 10,000 ಕೋಟಿ ರೂಪಾಯಿ ನಷ್ಟವನ್ನು ತಂದೊಡ್ಡುತ್ತದೆ.

ಸಿಂಗೂರಿನ ನ್ಯಾನೋ ಸ್ಥಾವರದಲ್ಲಿ ಬೃಹತ್ ಮೊತ್ತವನ್ನು ಹೂಡಲು ಯೋಜಿಸಿದ್ದ ಭಾರತ್ ಫೋರ್ಜ್ ಈಗ ಪಶ್ಚಿಮ ಬಂಗಾಳದಲ್ಲಿ ಹೂಡಿಕೆ ಮಾಡುವ ಆಸಕ್ತಿಯನ್ನು ಕಳೆದುಕೊಂಡಿದೆ. ಕಂಪನಿಯು ಈ ವರ್ಷ ಪ್ರಾರಂಭದಲ್ಲಿ ಸರಕಾರದೊಂದಿಗೆ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿತ್ತು. ಆದರೆ, ಸಿಂಗೂರ್ ಪ್ರತಿಭಟನೆ ಪ್ರಾರಂಭಗೊಂಡಂದಿನಿಂದ ಇದು ಸೂಕ್ತ ರೀತಿಯ ಪ್ರತಿಕ್ರಿಯೆಯನ್ನು ನೀಡುತ್ತಿಲ್ಲ.

ಕಳೆದ ಹಣಕಾಸು ವರ್ಷದ ಮೂರನೇ ತ್ರೈಮಾಸಿಕ ಅವಧಿಯಿಂದ 1,27,302 ಕೋಟಿ ಬಂಡವಾಳ ಆಕರ್ಷಿಸುವ ಯೋಜನೆಯನ್ನು ಪಶ್ಚಿಮ ಬಂಗಾಳ ಹೊಂದಿತ್ತು. ಆದರೆ, ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದರೆ, ರಾಜ್ಯವು ಗುರಿ ತಲುಪುವುದು ಕನಸಿನ ಮಾತಾಗಿದೆ.

ಇದರೊಂದಿಗೆ, ಆಧುನಿಕ್(ರೂ.5,000 ಕೋಟಿ), ಶ್ಯಾಂ ಸ್ಟೀಲ್ (ರೂ.8,000 ಕೋಟಿ), ಜಯ್ ಬಾಲಾಜಿ (ರೂ.16,500 ಕೋಟಿ), ಭೂಷಣ್ ಸ್ಟೀಲ್ (ರೂ.4000 ಕೋಟಿ), ಅಭಿಜಿತ್ ಸ್ಟೀಲ್(ರೂ.8000 ಕೋಟಿ) ಮುಂತಾದ ಸ್ಟೀಲ್ ಕಂಪನಿಗಳು ಈ ವರ್ಷ ಯೋಜನೆ ಕಾರ್ಯಗತಗೊಳಿಸಲು ತಯಾರಿ ನಡೆಸಿದ್ದವು. ಆದರೆ, ಇವುಗಳೂ ರಾಜ್ಯದಿಂದ ಹೊರಹೋಗುವ ಬಗ್ಗೆ ಚಿಂತನೆ ನಡೆಸುತ್ತಿವೆ.
ಮತ್ತಷ್ಟು
ನ್ಯಾನೋ ಮಾದರಿ ಸಾಧನೆಗಳ ಹೊಸ್ತಿಲಲ್ಲಿ ಭಾರತ
ಹಾಲು ಪರಿಶುದ್ಧತೆ ಪತ್ತೆಗೆ ನೂತನ ವಿಧಾನ
ಆಪಲ್‌ನಿಂದ ಕಡಿಮೆಬೆಲೆಗೆ ಐಪಾಡ್ ಬಿಡುಗಡೆ ನಿರೀಕ್ಷೆ
ನ್ಯಾನೋಗೆ ಮಧ್ಯಪ್ರದೇಶಕ್ಕೆ ಆಹ್ವಾನ: ಕಮಲನಾಥ್
ಭಾರತದಿಂದ ಜೀರಿಗೆ ರಫ್ತು ಮೂರು ಪಟ್ಟು ಹೆಚ್ಚಳ
'ನೆಟ್ವರ್ಕಿಂಗ್‌ನಲ್ಲಿ ಭಾರತೀಯರೇ ಹೆಚ್ಚು ಸಮರ್ಥರು'