ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತತ 2ನೇ ವಾರ ಕುಸಿದ ಹಣದುಬ್ಬರ: ಶೇ.12.34
ನಿರಂತರ ಎರಡನೇ ವಾರದಲ್ಲಿ ದೇಶದ ಹಣದುಬ್ಬರದಲ್ಲಿ ಕುಸಿತ ಕಂಡುಬಂದಿದ್ದು, ಹಣ್ಣು-ತರಕಾರಿ ಸೇರಿದಂತೆ ಆಹಾರ ವಸ್ತುಗಳ ಬೆಲೆ ಇಳಿಮುಖವಾದ ಪರಿಣಾಮ ಹಣದುಬ್ಬರ ಪ್ರಮಾಣ ಶೇ.12.34ಕ್ಕೆ ಕುಸಿದಿದೆ.

ಹಣದುಬ್ಬರ ನಿಯಂತ್ರಣ ಕ್ರಮಗಳು ಫಲ ನೀಡುತ್ತಿವೆ ಎಂದು ಕೇಂದ್ರ ಸರಕಾರ ಬೆನ್ನು ತಟ್ಟಿಕೊಳ್ಳಲಾರಂಭಿಸಿದೆಯಾದರೂ, ತನ್ನ ಕಠಿಣ ಹಣಕಾಸು ನೀತಿಗಳನ್ನು ಮುಂದುವರಿಸುವ ಬಗ್ಗೆ ರಿಸರ್ವ್ ಬ್ಯಾಂಕ್ ಸುಳಿವು ನೀಡಿದೆ.

ಆಗಸ್ಟ್ 23ಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರ ಪ್ರಮಾಣವು ಶೇ.12.40ರಿಂದ ಶೇ.06ನಷ್ಟು ಕುಸಿತ ಕಂಡಿದೆ. ಜಾಗತಿಕ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದು ಬೆಲೆ ಏರಿಕೆಯ ಮೇಲೆ ಪರಿಣಾಮ ಬೀರಿದ್ದರೂ, ಹಣದುಬ್ಬರ ಕುಸಿತದ ಸಮಯ ಆರಂಭವಾಗಿದೆ ಎಂದು ಈಗಲೇ ಹೇಳುವಂತಿಲ್ಲ ಎಂದು ಹಣಕಾಸು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಮೀನು, ಹಣ್ಣು ಮತ್ತು ತರಕಾರಿ ಹಾಗೂ ಸಂಬಾರ ಪದಾರ್ಥಗಳ ಬೆಲೆಯಲ್ಲಿ ಸ್ವಲ್ಪಮಟ್ಟಿನ ಕುಸಿತ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬೆಲೆ ಇಳಿಕೆಯ ಸರಣಿ ಆರಂಭವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕಮಲ್ ನಾಥ್ ತಿಳಿಸಿದ್ದರೆ, ಸುಮಾರು 30ರಷ್ಟು ಆವಶ್ಯಕ ವಸ್ತುಗಳ ಬೆಲೆಯು ಶೇ.6.90 ರಿಂದ ಶೇ.7.24ರಷ್ಟು ಕುಸಿತವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಆದರೆ ಆಮದು ಖಾದ್ಯ ತೈಲದ ಬೆಲೆ ಹಾಗೂ ಇತರ ಕೆಲವು ಉತ್ಪನ್ನಗಳು, ಕಚ್ಚಾ ರೇಷ್ಮೆ ಮುಂತಾದವುಗಳ ದರ ಏರುತ್ತಲೇ ಇದೆ.

ಇದಕ್ಕೆ ಮುನ್ನ, ಬೆಲೆಗಳ ಕುರಿತ ಸಂಪುಟ ಸಮಿತಿ ಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೆಲೆ ಏರಿಕೆ ಪರಿಸ್ಥಿತಿಯ ಕುರಿತು ಪರಾಮರ್ಶಿಸಿದ್ದರು. ಬಿಹಾರದಲ್ಲಿ ಪ್ರವಾಹದ ಹೊರತಾಗಿಯೂ, ಬೆಲೆಗಳಲ್ಲಿ ಇಳಿಮುಖವಾಗುತ್ತಿವೆ ಎಂದು ಸಂಪುಟ ಸಮಿತಿ ಸಭೆಗೆ ತಿಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಆದರೆ, ಬೆಲೆಗಳ ಇಳಿಮುಖ ಪ್ರಕ್ರಿಯೆ ಇದೇ ರೀತಿ ಮುಂದುವರಿಯುತ್ತದೆ ಎಂಬುದನ್ನು ಈಗಲೇ ನಿಖರವಾಗಿ ಹೇಳಲಾಗದು ಎಂದು ವಿಶ್ಲೇಷಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಬಂಗಾಳದ ಪ್ರತಿಷ್ಠೆಗೆ 'ಟಾಟಾ': 80,000 ಕೋ.ನಷ್ಟ
ನ್ಯಾನೋ ಮಾದರಿ ಸಾಧನೆಗಳ ಹೊಸ್ತಿಲಲ್ಲಿ ಭಾರತ
ಹಾಲು ಪರಿಶುದ್ಧತೆ ಪತ್ತೆಗೆ ನೂತನ ವಿಧಾನ
ಆಪಲ್‌ನಿಂದ ಕಡಿಮೆಬೆಲೆಗೆ ಐಪಾಡ್ ಬಿಡುಗಡೆ ನಿರೀಕ್ಷೆ
ನ್ಯಾನೋಗೆ ಮಧ್ಯಪ್ರದೇಶಕ್ಕೆ ಆಹ್ವಾನ: ಕಮಲನಾಥ್
ಭಾರತದಿಂದ ಜೀರಿಗೆ ರಫ್ತು ಮೂರು ಪಟ್ಟು ಹೆಚ್ಚಳ