ತೃಣಮೂಲ ಕಾಂಗ್ರೆಸ್ ನೇತೃತ್ವದ ಪ್ರತಿಭಟನೆಯಿಂದಾಗಿ ಸಿಂಗೂರಿನಲ್ಲಿ ನ್ಯಾನೋ ಸ್ಥಾವರದ ಕಾರ್ಯಗಳು ಸ್ಥಗಿತಗೊಂಡಿದ್ದರೂ, ನಿಗದಿತ ವೇಳೆಯಲ್ಲಿ ನ್ಯಾನೋ ಮಾರುಕಟ್ಟೆಗೆ ಬರಲಿದೆ ಎಂದು ಟಾಟಾ ಸಮೂಹಗ ಅಧ್ಯಕ್ಷ ರತನ್ ಟಾಟಾ ಭರವಸೆ ನೀಡಿದ್ದಾರೆ.
ಈ ಮೊದಲು ನಿಗದಿಪಡಿಸಿದಂತೆ ಅಕ್ಟೋಬರ್ ತಿಂಗಳಲ್ಲೇ ನ್ಯಾನೋ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಕಲ ಪ್ರಯತ್ನ ನಡೆಸುವುದಾಗಿ ರತನ್ ಟಾಟಾ ಹೇಳಿದ್ದಾರೆ.
ರತನ್ ಟಾಟಾ ಅವರು ಭಾರತೀಯ ಆಟೋಮೊಬೈಲ್ ನಿರ್ಮಾಪಕರ ಒಕ್ಕೂಟ(ಎಸ್ಐಎಎಂ) ಪ್ರತಿನಿಧಿಗಳೊಂದಿಗೆ ಗುರುವಾರ ಸಂಜೆ ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಏತನ್ಮಧ್ಯೆ, ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರತಿಭಟನೆಯು 12ನೇ ದಿನಕ್ಕೆ ಕಾಲಿಡುತ್ತಿರುವುದರೊಂದಿಗೆ, ಸಿಂಗೂರ್ ವಿವಾದ ಇತ್ಯರ್ಥಕ್ಕಾಗಿ ರಾಜ್ಯ ಸರಕಾರ ಮತ್ತು ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್‌ನೊಂದಿಗೆ ಪಶ್ಚಿಮ ಬಂಗಾಲ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಮೊದಲ ಹಂತದ ಮಾತುಕತೆಯನ್ನು ನಡೆಸಿದ್ದು, ಎರಡನೇ ಹಂತದ ನಿರ್ಣಾಯಕ ಮಾತುಕತೆಯು ಶುಕ್ರವಾರ ನಡೆಯಲಿದೆ.
|