ಫೋರ್ಬ್ಸ್ ಪತ್ರಿಕೆ ಪಟ್ಟಿ ಮಾಡಿರುವ ಏಶ್ಯಾದ ಪ್ರಮುಖ 50 ಕಂಪನಿಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಭಾರ್ತಿ ಏರ್‌ಟೆಲ್, ಇನ್ಫೋಸಿಸ್, ವಿಪ್ರೋ ಸೇರಿದಂತೆ ಭಾರತದ ಹತ್ತು ಕಂಪನಿಗಳು ಸೇರ್ಪಡೆಗೊಂಡಿವೆ.
ಚೀನಾದ 13 ಕಂಪನಿಗಳ ನಂತರ ಹತ್ತು ಕಂಪನಿಗಳು ಫೋರ್ಬ್ಸ್ ಪಟ್ಟಿಯಲ್ಲಿರುವುದರೊಂದಿಗೆ, ಭಾರತವು ಎರಡನೇ ಸ್ಥಾನದಲ್ಲಿದೆ.
ಇದರೊಂದಿಗೆ, ಆಸ್ಟ್ರೇಲಿಯಾದ ಏಳು ಕಂಪನಿಗಳು, ಥೈವಾನ್‌ನ ಆರು, ಹಾಂಗ್‌ಕಾಂಗ್‌ನ ಮೂರು ಕಂಪನಿಗಳು, ದಕ್ಷಿಣ ಆಫ್ರಿಕಾದ ಎರಡು, ಮತ್ತು ಥಾಯ್‌ಲ್ಯಾಂಡ್, ಇಂಡೋನೇಶಿಯಾ, ಮಲೇಶಿಯಾ ಮತ್ತು ಫಿಲಿಫೈನ್ಸ್‌ನ ತಲಾ ಒಂದು ಕಂಪನಿಗಳು ಫೋರ್ಬ್ಸ್ ಪಟ್ಟಿಗೆ ಸೇರ್ಪಡೆಗೊಂಡಿವೆ.
ಎಚ್‌ಡಿಎಫ್‌ಸಿ ಬ್ಯಾಂಕ್, ಬಿಎಚ್ಇಎಲ್, ಐಟಿಸಿ, ಲಾರ್ಸನ್ ಆಂಡ್ ಟರ್ಬೋ ಮತ್ತು ಮಹಿಂದ್ರಾ ಆಂಡ್ ಮಹಿಂದ್ರಾ ಕಂಪನಿಗಳೂ ಈ ಪಟ್ಟಿಯಲ್ಲಿವೆ.
ದೀರ್ಘಾವಧಿಯ ಲಾಭ, ಮಾರುಕಟ್ಟೆ ಮತ್ತು ಆದಾಯ ಅಭಿವೃದ್ಧಿ, ಶೇರು ಬೆಲೆ ಏರಿಕೆ ಕನಿಷ್ಟ ಐದು ಶತಕೋಟಿ ಡಾಲರ್ ಮಾರುಕಟ್ಟೆ ಹಿಡಿತ ಮುಂತಾದವುಗಳನ್ನು ಆಧರಿಸಿ ಫೋರ್ಬ್ಸ್ ಈ ಪಟ್ಟಿಯನ್ನು ತಯಾರಿಸಿತ್ತು.
|