ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಗ್‌ಬಜಾರ್‌ನಿಂದ 15 ನೂತನ ಮಳಿಗೆ
ದೇಶದ ಪ್ರಮುಖ ರಖಂ ಮಾರಾಟ ಸಂಸ್ಥೆ ಬಿಗ್ ಬಜಾರ್, ನವೆಂಬರ್ ಅಂತ್ಯದೊಳಗೆ ದೇಶದ ವಿವಿಧೆಡೆ ಸುಮಾರು 1,500-1,600 ಕೋಟಿ ರೂಪಾಯಿ ಬಂಡವಾಳದಲ್ಲಿ 15 ನೂತನ ಮಳಿಗೆಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದೆ.

ಇದರಿಂದಾಗಿ, ಪ್ಯಾಂಟಲೂನ್ ಸಮೂಹದ ಪೂರಕ ಸಂಸ್ಥೆಯಾಗಿರುವ ಬಿಗ್‌ಬಜಾರ್ ಮಳಿಗೆಗಳ ಸಂಖ್ಯೆಯು 112ಕ್ಕೆ ಏರಲಿದೆ. ಜೂನ್ 2009ರೊಳಗೆ ದೇಶದಲ್ಲಿ 145 ಮಳಿಗೆಗಳನ್ನು ಹೊಂದುವ ಗುರಿಯನ್ನು ಬಿಗ್‌ಬಜಾರ್ ಹೊಂದಿರುವುದಾಗಿ ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.

ಮೈಸೂರು, ಕತಕ್, ಪೂನಾ, ಚಂದೀಘಢ್, ಆಗ್ರಾ, ಫರಿದಾಬಾದ್, ಸೂರತ್, ನಾಸಿಕ್, ಮುಂಬಯಿ, ದೆಹಲಿ ಮತ್ತು ಶೋಲಾಪುರ್‌ಗಳಲ್ಲಿ ನೂತನ ಮಳಿಗೆಗಳನ್ನು ಬಿಗ್‌ಬಜಾರ್ ಪ್ರಾರಂಭಿಸಲಿದ್ದು, ಇದರಲ್ಲಿ ಕೆಲವು ಪ್ರದೇಶಗಳಲ್ಲಿ ಇದು ಎರಡನೇ ಮಳಿಗೆಯಾಗಿದೆ ಎಂದು ಬಿಗ್‌ಬಜಾರ್‌ನ ಸಿಇಒ ರಾಜನ್ ಮಲ್ಹೋತ್ರಾ ತಿಳಿಸಿದ್ದಾರೆ.

ಮೈಸೂರು, ಕಟಕ್, ಕೋಲ್ಕತ್ತಾ, ಪೂನಾ, ಆಗ್ರಾ, ಫರಿದಾಬಾದ್, ಸೋಲಾಪುರ್ ಬಿಗ್‌ಬಜಾರ್‌ನ ನೂತನ ಮಾರುಕಟ್ಟೆ ಪ್ರದೇಶಗಳಾಗಿದ್ದು, ಉತ್ತಮ ಫಲಿತಾಂಶ ತರುವ ಭರವಸೆಯನ್ನು ಕಂಪನಿಯು ಹೊಂದಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ.

ಪ್ರಸಕ್ತ ದೇಶದಲ್ಲಿ ಬಿಗ್‌ಬಜಾರ್ 97 ಮಳಿಗೆಗಳನ್ನು ಹೊಂದಿದ್ದು, ನವೆಂಬರ್ ಅಂತ್ಯದೊಳಗೆ 15 ಮಳಿಗೆಗಳನ್ನು ಸ್ಥಾಪಿಸುವ ಮೂಲಕ ಈ ಸಂಖ್ಯೆಯನ್ನು ಬಿಗ್‌ಬಜಾರ್ ಇನ್ನಷ್ಟು ಹೆಚ್ಚಿಸಲಿದೆ.
ಮತ್ತಷ್ಟು
ಟೊಯೋಟಾದಿಂದ 'ಕೊರೋಲಾ ಆಲ್ಟಿಸ್' ಬಿಡುಗಡೆ
ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ 10 ಕಂಪನಿಗಳು
ಇಂಟರ್ನೆಟ್ ಮೊಬೈಲ್‌ನಲ್ಲಿ ಹಿಂದುಳಿದ ಏಶ್ಯಾ
ನಿಗದಿತ ವೇಳೆಗೆ ನ್ಯಾನೋ: ರತನ್ ಟಾಟಾ
ಸತತ 2ನೇ ವಾರ ಕುಸಿದ ಹಣದುಬ್ಬರ: ಶೇ.12.34
ಬಂಗಾಳದ ಪ್ರತಿಷ್ಠೆಗೆ 'ಟಾಟಾ': 80,000 ಕೋ.ನಷ್ಟ