ಭಾರತದ ಮೂರು ಪ್ರಮುಖ ಬ್ರಾಂಡ್‌ಗಳಾದ ಐಸಿಐಸಿಐ, ಕಿಂಗ್‌ಫಿಶರ್ ಮತ್ತು ತಾಜ್, ಏಶಿಯಾ ಫೆಸಿಫಿಕ್ ಪ್ರದೇಶದಲ್ಲಿ ಗ್ರಾಹಕರಿಂದ ಅತಿ ಹೆಚ್ಚಿ ಮೆಚ್ಚುಗೆ ಪಡೆದ ಬ್ರಾಂಡ್‌ಗಳಾಗಿವೆ.
ಶುಕ್ರವಾರ ಬಿಡುಗಡೆಗೊಂಡ ಏಶಿಯಾ ಪೆಸಿಫಿಕ್ 1000 ಉನ್ನತ ಬ್ರಾಂಡ್‌ಗಳ 2008ರ ಸಮೀಕ್ಷೆಯ ವರದಿಗಳಲ್ಲಿ ಬ್ಯಾಂಕ್ ಮತ್ತು ಕ್ರೆಡಿಟ್ ವಿಭಾಗಗಳಲ್ಲಿ ಐಸಿಐಸಿಐ ಉನ್ನತ ಬ್ರಾಂಡ್ ಆಗಿ ಹೊರಹೊಮ್ಮಿದರೆ, ವಿಮಾನ ಮತ್ತು ಹೋಟೆಲ್ ಭಾಗದಲ್ಲಿ ಕಿಂಗ್‌ಫಿಶರ್ ಮತ್ತು ತಾಜ್ ಉನ್ನತ ಸ್ಥಾನವನ್ನು ಪಡೆದುಕೊಂಡಿವೆ.
ಇದರೊಂದಿಗೆ, ಜಾಗತಿಕ ಕಂಪನಿಗಳಾದ ಎಲ್‌ಜಿ, ಸೋನಿ, ಕ್ಯಾಡ್‌ಬರಿ, ಎಚ್‌ಪಿ ಮತ್ತು ನೋಕಿಯಾ ಆಯಾಯ ವಿಭಾಗಗಳಲ್ಲಿ ಉನ್ನತ ಸ್ಥಾನದಲ್ಲಿವೆ.
ಐಸಿಐಸಿಐ. ಕಿಂಗ್‌ಫಿಶರ್ ಮತ್ತು ತಾಜ್ ಹೊರತಾಗಿ, ಗ್ರಾಹಕರಿಂದ ಅತಿ ಹೆಚ್ಚು ಶ್ಲಾಘನೆಗೊಳಗಾದ ದ್ವಿತೀಯ ಸ್ತರದ ಕಂಪನಿಗಳ ಪಟ್ಟಿಯಲ್ಲಿ ಭಾರತದ ಕಂಪನಿಗಳಾದ ಎಸ್‌ಬಿಐ, ಜೆಟ್ ಮತ್ತು ಒಬೆರಾಯ್ ಸೇರ್ಪಡೆಗೊಂಡಿದೆ.
|