ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದ ಐಟಿ ಅಭಿವೃದ್ಧಿ ಮುಂದುವರಿಯಲಿದೆ: ನಾರಾಯಣಮೂರ್ತಿ
ಅಮೆರಿಕದ ಆರ್ಥಿಕ ಹಿಂಜರಿತದ ನಡುವೆಯೂ, ಭಾರತದ ಬಹು ಶತಕೋಟಿ ಐಟಿ ಕ್ಷೇತ್ರದ ಅಭಿವೃದ್ಧಿಯು ಮುಂದುವರಿಯಲಿದೆ ಎಂದು ಪ್ರಮುಖ ಐಟಿ ಸಂಸ್ಥೆ ಇನ್ಫೋಸಿಸ್‌ನ ಮುಖ್ಯ ಸಲಹಾಗಾರ ನಾರಾಯಣ ಮೂರ್ತಿ ಹೇಳಿದ್ದಾರೆ.

ಇಲ್ಲಿಯವರೆಗೂ ಐಟಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಅಷ್ಟೊಂದು ಕುಸಿತ ಉಂಟಾಗಿಲ್ಲ. ಮುಂದಿನ ಅವಧಿಯಲ್ಲೂ ಇದೇ ಅಭಿವೃದ್ಧಿಯನ್ನು ಕಾಣಬಹುದಾಗಿದೆ ಎಂದು ನಾರಾಯಣಮೂರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏತನ್ಮಧ್ಯೆ, ಸಿಂಗೂರ್ ವಿವಾದದ ಕುರಿತಾಗಿ ಪ್ರತಿಕ್ರಿಯಿಸಿರುವ ನಾರಾಯಣಮೂರ್ತಿ, ಎಲ್ಲಾ ರಾಜಕೀಯ ನಾಯಕರು, ಉದ್ಯಮ ನಾಯಕರು, ಅಧಿಕಾರಿಗಳು ಒಟ್ಟಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ ಎಂದಿದ್ದಾರೆ.

ಟಾಟಾದ ಸಣ್ಣ ಕಾರು ಯೋಜನೆಯ ಕುರಿತಾದ ಬಿಕ್ಕಟ್ಟಿನಿಂದ ಹೂಡಿಕೆದಾರರ ಬಂಡವಾಳ ಹೂಡಿಕೆಗಾರರ ವಿಶ್ವಾಸದ ಮೇಲೆ ಪರಿಣಾಮ ಉಂಟಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಪರಿಸ್ಥಿತಿಯು ಹೂಡಿಕೆದಾರರ ಮನದಲ್ಲಿ ಹಣಕಾಸು ಸ್ಥಿರತೆಯ ಪ್ರಶ್ನೆಯನ್ನು ಮೂಡಿಸುತ್ತದೆ. ಒಂದು ವೇಳೆ ಟಾಟಾ ಮತ್ತು ಪಶ್ಚಿಮ ಬಂಗಾಲ ಸರಕಾರವು ಒಟ್ಟಾಗಿ ಸಮಸ್ಯೆಯನ್ನು ಬಗೆಹರಿಸಿದಲ್ಲಿ ಹೂಡಿಕೆದಾರರಲ್ಲಿ ಮತ್ತೆ ವಿಶ್ವಾಸ ಮರುಕಳಿಸುವ ಸಾಧ್ಯತೆ ಇದೆ ಎಂದು ನಾರಾಯಣಮೂರ್ತಿ ತಿಳಿಸಿದ್ದಾರೆ.
ಮತ್ತಷ್ಟು
ಐಸಿಐಸಿಐ, ಕಿಂಗ್‌ಫಿಶರ್, ತಾಜ್ ಉನ್ನತ ಬ್ರಾಂಡ್‌ಗಳು
ಬಿಗ್‌ಬಜಾರ್‌ನಿಂದ 15 ನೂತನ ಮಳಿಗೆ
ಟೊಯೋಟಾದಿಂದ 'ಕೊರೋಲಾ ಆಲ್ಟಿಸ್' ಬಿಡುಗಡೆ
ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ 10 ಕಂಪನಿಗಳು
ಇಂಟರ್ನೆಟ್ ಮೊಬೈಲ್‌ನಲ್ಲಿ ಹಿಂದುಳಿದ ಏಶ್ಯಾ
ನಿಗದಿತ ವೇಳೆಗೆ ನ್ಯಾನೋ: ರತನ್ ಟಾಟಾ