ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನ್ಯಾನೋಗೆ ಜಾರ್ಖಂಡ್‌ಗೆ ಆಹ್ವಾನ
ಜಮೀನು ಮತ್ತು ಇತರ ಸೌಲಭ್ಯಗಳನ್ನು ನೀಡುವ ಭರವಸೆಯೊಂದಿಗೆ, ನ್ಯಾನೋ ಕಾರು ಸ್ಥಾವರನ್ನು ರಾಜ್ಯದಲ್ಲಿ ಪ್ರಾರಂಭಿಸಲು ಟಾಟಾ ಮೋಟಾರ್ಸ್‌ಗೆ ಆಮಂತ್ರಣ ನೀಡಿರುವುದಾಗಿ ಜಾರ್ಖಂಡ್ ಉಪಮುಖ್ಯಮಂತ್ರಿ ಸುಧೀರ್ ಮಹ್ತೋ ತಿಳಿಸಿದ್ದಾರೆ. ಅಲ್ಲದೆ, ಈ ಕುರಿತಾಗಿ ಟಾಟಾ ಮೋಟಾರ್ಸ್ ಅಧ್ಯಕ್ಷ ರತನ್ ಟಾಟಾ ಅವರಿಗೆ ಎರಡು ದಿನಗಳೊಳಗೆ ಪತ್ರವನ್ನು ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ಟಾಟಾ ಮೋಟಾರ್ಸ್, ನ್ಯಾನೋ ಕಾರು ಸ್ಥಾವರ ಸ್ಥಾಪನೆಗಾಗಿ ಬೇರೆಲ್ಲಿಗೂ ಹೋಗಬೇಕಾಗಿಲ್ಲ. ಒಂದು ವೇಳೆ ಟಾಟಾ ಮೋಟಾರ್ಸ್ ಬಯಸಿದಲ್ಲಿ, ಜಮೀನು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಟಾಟಾ ಮೋಟಾರ್ಸ್ ನೀಡುವುದಾಗಿ ಜಾರ್ಖಂಡ್ ಮುಖ್ಯಮಂತ್ರಿ ಶಿಬು ಸೊರೇನ್ ಈಗಾಗಲೇ ಭರವಸೆ ನೀಡಿದ್ದಾರೆ ಎಂದು ಮಹ್ತೋ ತಿಳಿಸಿದ್ದಾರೆ.

ಒಂದು ವೇಳೆ ಟಾಟಾವು ಜಾರ್ಖಂಡ್‌ನ್ನು ನ್ಯಾನೋ ಕಾರ್ಖಾನೆ ನಿರ್ಮಾಣಕ್ಕೆ ಆಯ್ದುಕೊಂಡಲ್ಲಿ ಟಾಟಾಗೆ ಎಷ್ಟು ಅವಧಿಯೊಳಗೆ ರಾಜ್ಯವು ಜಮೀನು ನೀಡುತ್ತದೆ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಹ್ತೋ, ಟಾಟಾ ಮೋಟಾರ್ಸ್, ರಾಂಚಿ, ಜೇಮ್‌ಶೆಡ್‌ಪುರ್ ಅಥವಾ ಜಾರ್ಖಂಡ್‌ನ ಯಾವುದೇ ಸ್ಥಳದಲ್ಲಾದರೂ ನ್ಯಾನೋ ಕಾರ್ಖಾನೆಯನ್ನು ಪ್ರಾರಂಭಿಸಲು ಸಿದ್ಧವಿದೆಯಾ ಎಂಬುದನ್ನು ಮೊದಲಿಗೆ ನಿರ್ಧರಿಸಲಿ. ನಂತರ, ಆದಷ್ಟು ಶೀಘ್ರದಲ್ಲಿ ಟಾಟಾ ಮೋಟಾರ್ಸ್‌ಗೆ ಜಮೀನು ಒದಗಿಸಲಾಗುವುದು ಎಂದರು.

ಪ್ರಮುಖ ಕಂಪನಿಗಳಾದ ಟಾಟಾ ಸ್ಟೀಲ್, ಏರ್ಸೋಮಿತ್ತಲ್ ಸರಕಾರದೊಂದಿಗೆ ಈಗಾಗಲೇ ತಿಳುವಳಿಕಾ ಪತ್ರಕ್ಕೆ ಸಹಿ ಹಾಕಿದ್ದು, ಟಾಟಾ ಮೋಟಾರ್ಸ್‌ನೊಂದಿಗೆ ಈ ಕಂಪನಿಗಳಿಗೂ ತಮ್ಮ ಕೇಂದ್ರವನ್ನು ಸ್ಥಾಪಿಸಲು ರಾಜ್ಯವು ಜಮೀನನ್ನು ಒದಗಿಸುತ್ತದೆ ಎಂದು ರಾಜ್ಯ ಉದ್ಯಮ ಸಚಿವರೂ ಆಗಿರುವ ಮಹ್ತೋ ಭರವಸೆ ನೀಡಿದ್ದಾರೆ.

ಅಲ್ಲದೆ, ಇಂತಹ ಪ್ರಸ್ತಾಪಿತ ಯೋಜನೆಗಳಿಂದಾಗಿ ಪರಿಣಾಮಕ್ಕೊಳಗಾದ ಕುಟುಂಬಗಳಿಗಾಗಿ ನೂತನ ಪುನರ್ವಸತಿ ನೀತಿ ಕಲ್ಪಿಸಲಾಗುವುದು ಎಂದೂ ಅವರು ಹೇಳಿದ್ದಾರೆ.
ಮತ್ತಷ್ಟು
ಬೆಲೆ ಏರಿಕೆ ಆತಂಕಕಾರಿ: ಪ್ರಧಾನಿ ಸಿಂಗ್
ಭಾರತದ ಐಟಿ ಅಭಿವೃದ್ಧಿ ಮುಂದುವರಿಯಲಿದೆ: ನಾರಾಯಣಮೂರ್ತಿ
ಐಸಿಐಸಿಐ, ಕಿಂಗ್‌ಫಿಶರ್, ತಾಜ್ ಉನ್ನತ ಬ್ರಾಂಡ್‌ಗಳು
ಬಿಗ್‌ಬಜಾರ್‌ನಿಂದ 15 ನೂತನ ಮಳಿಗೆ
ಟೊಯೋಟಾದಿಂದ 'ಕೊರೋಲಾ ಆಲ್ಟಿಸ್' ಬಿಡುಗಡೆ
ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ 10 ಕಂಪನಿಗಳು