ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುಸಾ 1121 ಅಕ್ಕಿ ರಫ್ತಿಗೆ ಸರಕಾರ ಅನುಮತಿ
ಪುಸಾ 1121 ಮಾದರಿಯ ಅಕ್ಕಿಯನ್ನು ಅಕ್ಟೋಬರ್ 15ರಿಂದ ರಫ್ತು ಮಾಡಲು ಸರಕಾರವು ಅನುಮತಿ ನೀಡಿದೆ ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 15ರಿಂದ ಪುಸಾ 1121 ಅಕ್ಕಿಯನ್ನು ವಿದೇಶಗಳಲ್ಲಿ ಅದರಲ್ಲೂ ಮುಖ್ಯವಾಗಿ ಕೊಲ್ಲಿ ರಾಷ್ಟ್ರಗಳಿಗೆ ರಫ್ತು ಮಾಡಲಾಗುವುದು ಎಂದು ಕೃಷಿ ಮತ್ತು ಸಂಸ್ಕರಣ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಮಂಡಳಿ(ಅಪೆಡಾ)ದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಬಾಸ್ಮತಿ ಅಕ್ಕಿಯಷ್ಟೇ ಗುಣಮಟ್ಟವನ್ನು ಹೊಂದಿರುವ ಪೂಸಾ 1121 ಅಕ್ಕಿ ರಫ್ತು ಮಾಡುವ ವ್ಯಾಪಾರಿಗಳು ಅಪೆಡಾದೊಂದಿಗೆ ಅಕ್ಟೋಬರ್ 15ರೊಳಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಪುಸಾ 1121 ಅಕ್ಕಿಯನ್ನು ಮುಖ್ಯವಾಗಿ ಭಾರತದ ಎರಡು ಪ್ರಮುಖ ಅಕ್ಕಿ ಉತ್ಪಾದನಾ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣದಲ್ಲಿ ಉತ್ಪಾದಿಸಲಾಗುತ್ತದೆ.

ವಿದೇಶಿ ವ್ಯಾಪಾರದ ಪ್ರಧಾನ ನಿರ್ದೇಶಕರು(ಡಿಜಿಟಿಎಫ್) ಪುಸಾ 1121 ಮೇಲಿನ ರಫ್ತು ನಿಷೇಧವನ್ನು ಹಿಂತೆಗೆದುಕೊಂಡಿದ್ದು, ಇನ್ನಷ್ಟೇ ನಿರ್ಧರಿಸಬೇಕಾಗಿರುವ ಕನಿಷ್ಟ ರಫ್ತು ಬೆಲೆಯಲ್ಲಿ ವ್ಯಾಪಾರಿಗಳು ಈ ಅಕ್ಕಿಯನ್ನು ರಫ್ತು ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ನ್ಯಾನೋಗೆ ಜಾರ್ಖಂಡ್‌ಗೆ ಆಹ್ವಾನ
ಬೆಲೆ ಏರಿಕೆ ಆತಂಕಕಾರಿ: ಪ್ರಧಾನಿ ಸಿಂಗ್
ಭಾರತದ ಐಟಿ ಅಭಿವೃದ್ಧಿ ಮುಂದುವರಿಯಲಿದೆ: ನಾರಾಯಣಮೂರ್ತಿ
ಐಸಿಐಸಿಐ, ಕಿಂಗ್‌ಫಿಶರ್, ತಾಜ್ ಉನ್ನತ ಬ್ರಾಂಡ್‌ಗಳು
ಬಿಗ್‌ಬಜಾರ್‌ನಿಂದ 15 ನೂತನ ಮಳಿಗೆ
ಟೊಯೋಟಾದಿಂದ 'ಕೊರೋಲಾ ಆಲ್ಟಿಸ್' ಬಿಡುಗಡೆ