ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೂಗಲ್‌ಗೆ 10 ವರ್ಷ, ದಿನಕ್ಕೆ 1.5 ಬಿಲಿಯ ಶೋಧಕರು
ಸರಿಯಾಗಿ ಹತ್ತು ವರ್ಷಗಳ ಹಿಂದೆ ಅಂದರೆ ಸೆಪ್ಚೆಂಬರ್ 7, 1998ರಂದು ಲಾರಿ ಪೇಜ್ ಮತ್ತು ಸರ್ಜೆ ಬ್ರಿನ್ ಎಂಬಿಬ್ಬರು ಇಂಟರ್ನೆಟ್ ಸರ್ಚ್ ಎಂಜಿನ್ ಸೃಷ್ಟಿಸಲು ಹೊರಟಾಗ ಅದಿಂದು ಈ ಮಟ್ಟಕ್ಕೆ ಬೆಳೆಯುತ್ತದೆ ಎಂಬ ಅಗಾಧ ಕಲ್ಪನೆ ಅವರ ಬಳಿ ಇರಲಿಲ್ಲ. ಅವರ ಬಳಿ ಇದ್ದದ್ದು, ತಮ್ಮ ಬುದ್ಧಿ ಶಕ್ತಿ ನಾಲ್ಕು ಕಂಪ್ಯೂಟರುಗಳು ಮತ್ತು ಹೂಡಿಕೆದಾರರ ಒಂದು ಲಕ್ಷ ಡಾಲರ್ ಮಾತ್ರ.

ಗೂಗಲ್‌ಗೆ ಇಂದಿಗೆ ಸರಿಯಾಗಿ ಹತ್ತು ವರ್ಷ ತುಂಬಿದೆ. ದಿನವೊಂದರ ಗೂಗಲ್‌ಗೆ ಭೇಟಿ ನೀಡುವ ಹುಡುಕಾಟಗಾರರ ಸಂಖ್ಯೆ 150 ಕೋಟಿ! ದೈತ್ಯ ಕಂಪ್ಯೂಟರ್ ನೆಟ್ವರ್ಕ್ ಸಂಸ್ಥೆಯಾಗಿ ಬೆಳೆದು ನಿಂತಿರುವ ಗೂಗಲ್ ಇಂದು 20 ಸಾವಿರ ಸಿಬ್ಬಂದಿಗಳನ್ನು ಹೊಂದಿದೆ. 150 ಶತಕೋಟಿ ಡಾಲರ್ ಮೌಲ್ಯ ಬಾಳುವ ಗೂಗಲ್ ಮಾಧ್ಯಮ, ಮಾರುಕಟ್ಟೆ ಮತ್ತು ತಂತ್ರಜ್ಞಾನ ಸ್ವರೂಪವನ್ನೇ ಬದಲಿಸಿದೆ.

ಯಾವುದೇ ಕಾರ್ಯವನ್ನು ಸರಕಾರ ಮತ್ತು ನಿಮ್ಮ ವೈರಿಗಳ ಸವಾಲೆದುರಿಸದೆ ಮಾಡಲು ಸಾಧ್ಯವಿಲ್ಲ ಎಂದು ಸರ್ಚ್ ಎಂಜಿನ್‌ಲ್ಯಾಂಡ್‌ನ ಮುಖ್ಯ ಸಂಪಾದಕರಾಗಿರುವ ಡೇನಿ ಸುಲ್ಲಿವನ್ ಹೇಳಿದ್ದಾರೆ. ಡೇನಿ ಆರಂಭದಿಂದಲೇ ಗೂಗಲ್ ಅನುಸರಿಸಿದವರು.

ಮೊಬೈಲ್ ಪೋನ್‌ಗಳು ಮತ್ತು ಇತರ ಮೊಬೈಲ್ ವಸ್ತುಗಳಿಗೆ ವ್ಯಾಪಕತೆಯು ಗೂಗಲ್ ಮ್ಯಾನೇಜ್‌ಮೆಂಟಿನ ಮುಂದಿನ ದಶಕದ ಪ್ರಮುಖ ಕಾರ್ಯಸೂಚಿ ಸ್ಥಾನವನ್ನು ಅಲಂಕರಿಸಿದೆ.

ಇಂಟರ್ನೆಟ್‌ನಲ್ಲಿ ಯಾವುದೇ ನೆಟ್ವರ್ಕ್, ವೆಬ್, ಚಿತ್ರ ಅಥವಾ ಯಾವುದೇ ಮಾಹಿತಿಯನ್ನೂ ಗೂಗಲ್ ಮುಖಾಂತರ ಹುಡುಕ ಬಹುದಾಗಿದ್ದು, ಅದು ಸ್ಥಳೀಯ ಭಾಷೆಗಳಲ್ಲೂ ಸೇವೆ ಒದಗಿಸುತ್ತಿದೆ.
ಮತ್ತಷ್ಟು
ಎನ್ಎಸ್‌ಜಿ ವಿನಾಯಿತಿಗೆ ಇಂಡಿಯಾ ಇಂಕ್ ಸ್ವಾಗತ
ಪುಸಾ 1121 ಅಕ್ಕಿ ರಫ್ತಿಗೆ ಸರಕಾರ ಅನುಮತಿ
ನ್ಯಾನೋಗೆ ಜಾರ್ಖಂಡ್‌ಗೆ ಆಹ್ವಾನ
ಬೆಲೆ ಏರಿಕೆ ಆತಂಕಕಾರಿ: ಪ್ರಧಾನಿ ಸಿಂಗ್
ಭಾರತದ ಐಟಿ ಅಭಿವೃದ್ಧಿ ಮುಂದುವರಿಯಲಿದೆ: ನಾರಾಯಣಮೂರ್ತಿ
ಐಸಿಐಸಿಐ, ಕಿಂಗ್‌ಫಿಶರ್, ತಾಜ್ ಉನ್ನತ ಬ್ರಾಂಡ್‌ಗಳು