ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2020ರ ವೇಳೆ ಮುಂಚೂಣಿಯಲ್ಲಿ ಆಟೋ ಉದ್ಯಮ : ಐಬಿಎಂ
ಟಾಟಾ ಮೋಟಾರ್ಸ್‌ನ ನ್ಯಾನೋದಂತಹ ನಾವೀನ್ಯ ಯೋಜನೆಗಳಿಂದಾಗಿ 2020ರ ವೇಳೆಗೆ ಭಾರತದ ಆಟೋಮೊಬೈಲ್ ಉದ್ಯಮವು ಜಾಗತಿಕ ಮಟ್ಟದಲ್ಲಿ ನಾಯಕತ್ವವನ್ನು ಪಡೆದುಕೊಳ್ಳಲಿದೆ ಎಂದು ಐಟಿ ದೈತ್ಯ ಐಬಿಎಂ ಅಭಿಪ್ರಾಯಪಟ್ಟಿದೆ.

2020ರೊಳಗೆ ಭಾರತದ ಆಟೋಮೊಬೈಲ್ ಉದ್ಯಮವು ಜಾಗತಿಕ ಆಟಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಗೆ ಸರಿಯುವುದು ಸ್ಪಷ್ಟವಾಗಿದೆ ಎಂದು ಐಬಿಎಂ ತನ್ನ ಅಧ್ಯಯನದ ವರದಿಯಲ್ಲಿ ತಿಳಿಸಿದೆ.

ಹದಿನೈದು ರಾಷ್ಟ್ರಗಳಲ್ಲಿ ಸುಮಾರು 125 ನೈಜ ಸಾಮಾಗ್ರಿ ನಿರ್ಮಾಣದ ಕಾರ್ಯನಿರ್ವಾಹಕರ ಮತ್ತು ಸಾಮಾಗ್ರಿ ಪೂರೈಕೆದಾರರ ಸಂದರ್ಶನದ ಮೂಲಕ ನಡೆಸಿದ ಈ ಅಧ್ಯಯನವು, ವಿಶ್ವದಾದ್ಯಂತ ಆಟೋಮೊಬೈಲ್ ಕ್ಷೇತ್ರದಲ್ಲಿ ತನ್ನ ಕ್ರಿಯಾಶೀಲ ಕಾರ್ಯಚತುರತೆಯಿಂದಾಗಿ ಭಾರತವು ಮುಂಚೂಣಿ ಸ್ಥಾನವನ್ನು ಪಡೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.

ಟಾಟಾ ನ್ಯಾನೋ ಯೋಜನೆಯು ಭಾರತದ ಆಟೋಮೊಬೈಲ್ ಕ್ಷೇತ್ರದಲ್ಲಿನ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ. ಇದು ಜಾಗತಿಕ ಆಟೋಮೊಬೈಲ್ ಕ್ಷೇತ್ರದಲ್ಲಿ ಭಾರತದ ಪ್ರತಿಷ್ಠೆಯನ್ನು ಹೆಚ್ಚಿಸಿದೆ ಎಂದು ಐಬಿಎಂ ಆಟೋಮೇಟಿವ್ ಉದ್ಯಮದ ಉಪಾಧ್ಯಕ್ಷ ಸಂಜಯ್ ರಿಶಿ ತಿಳಿಸಿದ್ದಾರೆ.
ಮತ್ತಷ್ಟು
ಗೂಗಲ್‌ಗೆ 10 ವರ್ಷ, ದಿನಕ್ಕೆ 1.5 ಬಿಲಿಯ ಶೋಧಕರು
ಎನ್ಎಸ್‌ಜಿ ವಿನಾಯಿತಿಗೆ ಇಂಡಿಯಾ ಇಂಕ್ ಸ್ವಾಗತ
ಪುಸಾ 1121 ಅಕ್ಕಿ ರಫ್ತಿಗೆ ಸರಕಾರ ಅನುಮತಿ
ನ್ಯಾನೋಗೆ ಜಾರ್ಖಂಡ್‌ಗೆ ಆಹ್ವಾನ
ಬೆಲೆ ಏರಿಕೆ ಆತಂಕಕಾರಿ: ಪ್ರಧಾನಿ ಸಿಂಗ್
ಭಾರತದ ಐಟಿ ಅಭಿವೃದ್ಧಿ ಮುಂದುವರಿಯಲಿದೆ: ನಾರಾಯಣಮೂರ್ತಿ