ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್ಎಸ್‌ಜಿ ವಿನಾಯತಿ: ಹೆಚ್ಚು ಬಂಡವಾಳ ನಿರೀಕ್ಷೆ
ಪರಮಾಣು ಪೂರೈಕಾ ಸಮೂಹವು ಭಾರತದ ಮೇಲಿನ ಪರಮಾಣು ವ್ಯಾಪಾರ ನಿಷೇಧವನ್ನು ಹಿಂತೆಗೆದುಕೊಂಡ ನಂತರ, ಮುಂದಿನ 15 ವರ್ಷಗಳಲ್ಲಿ ಸುಮಾರು 1.2 ಟ್ರಿಲಿಯನ್ ರೂಪಾಯಿ ವೆಚ್ಚದಲ್ಲಿ 18-20 ನೂತನ ಪರಮಾಣು ವಿದ್ಯುತ್ ಸ್ಥಾವರಗಳು ಸ್ಥಾಪನೆಗೊಳ್ಳಲಿವೆ ಎಂದು ಉದ್ಯಮ ಮಂಡಳಿಗಳು ನಿರೀಕ್ಷಿಸಿವೆ.

ಭಾರತೊಂದಿಗಿನ ಪರಮಾಣು ವ್ಯಾಪಾರದ ನಿಷೇಧವನ್ನು ಹಿಂತೆಗೆಯಬೇಕೆಂಬ ಅಮೆರಿಕದ ಪ್ರಸ್ತಾಪಕ್ಕೆ 45 ರಾಷ್ಟ್ರಗಳು ಅನುಮೋದನೆ ನೀಡಿದ್ದು, ಇದು ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದ ಮುಂದುವರಿಕೆಯನ್ನು ಸರಳೀಕೃತಗೊಳಿಸಲಿದೆ.

ಎನ್ಎಸ್‌ಜಿ ಸ್ಪಷ್ಟನೆಯು ಮುಂದಿನ 15 ವರ್ಷಗಳಲ್ಲಿ 1.2 ಟ್ರಿಲಿಯನ್ ವ್ಯವಹಾರ ಅವಕಾಶಗಳ ವಿಶ್ವಾಸವನ್ನು ಹೆಚ್ಚಿಸಿದ್ದು, ಇದರಿಂದ ರೂ.5,000-6,000 ಕೋಟಿ ವೆಚ್ಚದ 18-20 ಪರಮಾಣು ರಿಯಾಕ್ಟರುಗಳು ನಿರ್ಮಾಣಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಉದ್ಯಮ ಒಕ್ಕೂಟದ ಹೇಳಿಕೆಗಳು ತಿಳಿಸಿವೆ.

ಅಲ್ಲದೆ, ಎನ್ಎಸ್‌ಜಿ ವಿನಾಯಿತಿಯು, ಪ್ರಸಕ್ತ ತನ್ನ ಸಾಮರ್ಥ್ಯದ ಅರ್ಧದಷ್ಟರಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಪರಮಾಣು ರಿಯಾಕ್ಟರುಗಳಿಗೆ ಪೂರ್ತಿ ಪರಮಾಣು ಇಂಧನವನ್ನು ಪಡೆಯಲು ಸಹಾಯಕವಾಗಲಿದೆ ಎಂದು ಭಾರತೀಯ ಉದ್ಯಮ ಒಕ್ಕೂಟವು ಹೇಳಿದೆ.

ಪರಮಾಣು ಇಂಧನ ನಿರ್ಮಾಣದಲ್ಲಿ ವಿದೇಶಿ ಹೂಡಿಕೆಗಳನ್ನು ಸ್ವಾಗತಿಸುವುದಾಗಿ ಒಕ್ಕೂಟವು ಇದೇ ವೇಳೆ ತಿಳಿಸಿದೆ.
ಮತ್ತಷ್ಟು
2020ರ ವೇಳೆ ಮುಂಚೂಣಿಯಲ್ಲಿ ಆಟೋ ಉದ್ಯಮ : ಐಬಿಎಂ
ಗೂಗಲ್‌ಗೆ 10 ವರ್ಷ, ದಿನಕ್ಕೆ 1.5 ಬಿಲಿಯ ಶೋಧಕರು
ಎನ್ಎಸ್‌ಜಿ ವಿನಾಯಿತಿಗೆ ಇಂಡಿಯಾ ಇಂಕ್ ಸ್ವಾಗತ
ಪುಸಾ 1121 ಅಕ್ಕಿ ರಫ್ತಿಗೆ ಸರಕಾರ ಅನುಮತಿ
ನ್ಯಾನೋಗೆ ಜಾರ್ಖಂಡ್‌ಗೆ ಆಹ್ವಾನ
ಬೆಲೆ ಏರಿಕೆ ಆತಂಕಕಾರಿ: ಪ್ರಧಾನಿ ಸಿಂಗ್