ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಂಗೂರ್ ಒಪ್ಪಂದ: ಟಾಟಾಗೆ ತೃಪ್ತಿ ಇಲ್ಲ
ಪಶ್ಚಿಮ ಬಂಗಾಲ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ನಡುವಿನ ಒಪ್ಪಂದದಿಂದಾಗಿ ಕಳೆದ ಕೆಲವು ದಿನಗಳ ಸಿಂಗೂರ್ ಬಿಕ್ಕಟ್ಟು ಶಮನಗೊಂಡ ನಿಟ್ಟಿನಲ್ಲಿ ನ್ಯಾನೋ ಹಾದಿ ಸುಗಮವಾಗಬಹುದೆಂಬ ನಿರೀಕ್ಷೆಯಿದ್ದರೂ. ಈ ಒಪ್ಪಂದದಿಂದ ತಾನು ಅಸಮಧಾನದೊಂಡಿರುವುದಾಗಿ ಟಾಟಾ ಹೇಳುವ ಮೂಲಕ ಈ ನಿರೀಕ್ಷೆಯನ್ನು ಹುಸಿಯಾಗಿಸಿದೆ.

ಕಳೆದ ರಾತ್ರಿ ಸರಕಾರ ಮತ್ತು ಮಮತಾ ಬ್ಯಾನರ್ಜಿ ನಡುವೆ ನಡೆದ ಒಪ್ಪಂದವು ಸ್ಪಷ್ಟತೆಯ ಕೊರತೆಯನ್ನು ಎದುರಿಸುತ್ತಿದ್ದು, ಟಾಟಾವು ಈ ಒಪ್ಪಂದದ ಕುರಿತಾಗಿ ಅಸಮಧಾನವನ್ನು ಹೊಂದಿದೆ ಎಂದು ಟಾಟಾ ಮೋಟಾರ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸೀಮಿತ ಸ್ಪಷ್ಟನೆಯ ಮಾತುಕತೆಯಿಂದ ಕಂಪನಿಯು ಬೇಸರ ಹೊಂದಿದ್ದು, ನ್ಯಾನೋ ಸ್ಥಾವರದ ಕಾರ್ಯಸ್ಥಗಿತವು ಮುಂದುವರಿಯಲಿದೆ ಎಂದು ಕಂಪನಿಯು ದೃಢಪಡಿಸಿದೆ.

ಆದರೂ, ಯೋಜನೆ ಮುಂದುವರಿಸಲು ಯಾವುದೇ ಸಮಸ್ಯೆಯನ್ನು ತಂದೊಡ್ಡುವುದಿಲ್ಲ ಎಂದಾದರೆ, ಪರಿಸ್ಥಿತಿಯ ಅವಲೋಕನವನ್ನು ಟಾಟಾ ಮಾಡಲಿದೆ ಎಂದು ಕಂಪನಿಯು ಹೇಳಿದೆ.

ಒಪ್ಪಂದದ ಮೊದಲು ಟಾಟಾವನ್ನು ಭೇಟಿಯಾಗದ ಕುರಿತಾಗಿ ಟಾಟಾ ಅಸಮಧಾನ ಹೊಂದಿರುವುದಾಗಿ ಮೂಲಗಳು ಹೇಳಿವೆ.
ಮತ್ತಷ್ಟು
ಎನ್ಎಸ್‌ಜಿ ವಿನಾಯತಿ: ಹೆಚ್ಚು ಬಂಡವಾಳ ನಿರೀಕ್ಷೆ
2020ರ ವೇಳೆ ಮುಂಚೂಣಿಯಲ್ಲಿ ಆಟೋ ಉದ್ಯಮ : ಐಬಿಎಂ
ಗೂಗಲ್‌ಗೆ 10 ವರ್ಷ, ದಿನಕ್ಕೆ 1.5 ಬಿಲಿಯ ಶೋಧಕರು
ಎನ್ಎಸ್‌ಜಿ ವಿನಾಯಿತಿಗೆ ಇಂಡಿಯಾ ಇಂಕ್ ಸ್ವಾಗತ
ಪುಸಾ 1121 ಅಕ್ಕಿ ರಫ್ತಿಗೆ ಸರಕಾರ ಅನುಮತಿ
ನ್ಯಾನೋಗೆ ಜಾರ್ಖಂಡ್‌ಗೆ ಆಹ್ವಾನ