ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಕ್ಷ್ಮಿ ಮಿತ್ತಲ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
ಭಾರತೀಯ ಮೂಲದ ಸ್ಟೀಲ್ ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರಿಗೆ ಫೋರ್ಬ್ಸ್ ತೃತೀಯ ಜೀವಮಾನ ಸಾಧನಾ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಅಮೆರಿಕದ ಬಿಸ್ನೆಸ್ ಮ್ಯಾಗಸೀನ್ ಫೋರ್ಬ್ಸ್ ತಿಳಿಸಿದೆ.

ಸೋಮವಾರ ರಾತ್ರಿ ಸಿಂಗಾಪುರ್‌ನ ಫೋರ್ಬ್ಸ್ ಜಾಗತಿಕ ಸಿಇಒ ಸಮಾವೇಶದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದು, ಈ ಸಮಾರಂಭದಲ್ಲಿ ಸುಮಾರು 450ಕ್ಕೂ ಹೆಚ್ಚು ಉದ್ಯಮ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

ಈ ಮೊದಲು ಮಾರ್ಚ್ ತಿಂಗಳಲ್ಲಿ, ಫೋರ್ಬ್ಸ್ ಪತ್ರಿಕೆಯು ತನ್ನ ವಿಶ್ವದ ಅತಿ ಶ್ರೀಮಂತ ಬಿಲಿಯಾಧಿಪತಿ ಸ್ಥಾನಪಟ್ಟಿಯಲ್ಲಿ ಮಿತ್ತಲ್ ಅವರಿಗೆ ನಾಲ್ಕನೇ ಸ್ಥಾನವನ್ನು ನೀಡಿತ್ತು.

ಔದ್ಯಮಿಕ ಬಂಡವಾಳ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಮತ್ತು ಮುಕ್ತ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡವರನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಭಾರತದ ರಾಜಸ್ಥಾನದಲ್ಲಿ ಜನಿಸಿರುವ ಮಿತ್ತಲ್, 1976ರಲ್ಲಿ ಮಿತ್ತಲ್ ಸ್ಟೀಲ್ ಕಂಪನಿಯನ್ನು ಸ್ಥಾಪಿಸಿದರು. ನಂತರ, ಅಮೆರಿಕದ ಅಂತಾರಾಷ್ಟ್ರೀಯ ಸ್ಟೀಲ್ ಕಂಪನಿ ಸೇರಿದಂತೆ ವಿಶ್ವದಾದ್ಯಂತ ಅನೇಕ ಸ್ಟೀಲ್ ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡು, ವಿಶ್ವದ ಅತಿ ದೊಡ್ಡ ಸ್ಟೀಲ್ ಉತ್ಪಾದನಾ ಕಂಪನಿಯಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾದರು.
ಮತ್ತಷ್ಟು
ಸಿಂಗೂರ್ ಒಪ್ಪಂದ: ಟಾಟಾಗೆ ತೃಪ್ತಿ ಇಲ್ಲ
ಎನ್ಎಸ್‌ಜಿ ವಿನಾಯತಿ: ಹೆಚ್ಚು ಬಂಡವಾಳ ನಿರೀಕ್ಷೆ
2020ರ ವೇಳೆ ಮುಂಚೂಣಿಯಲ್ಲಿ ಆಟೋ ಉದ್ಯಮ : ಐಬಿಎಂ
ಗೂಗಲ್‌ಗೆ 10 ವರ್ಷ, ದಿನಕ್ಕೆ 1.5 ಬಿಲಿಯ ಶೋಧಕರು
ಎನ್ಎಸ್‌ಜಿ ವಿನಾಯಿತಿಗೆ ಇಂಡಿಯಾ ಇಂಕ್ ಸ್ವಾಗತ
ಪುಸಾ 1121 ಅಕ್ಕಿ ರಫ್ತಿಗೆ ಸರಕಾರ ಅನುಮತಿ