ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಣು ವಿದ್ಯುತ್ ಯೋಜನೆಯತ್ತ ವೀಡಿಯೋಕೋನ್ ದೃಷ್ಟಿ
ಎಲೆಕ್ಟ್ರಾನಿಕ್ ಮತ್ತು ಗೃಹ ಸಾಮಾಗ್ರಿ ನಿರ್ಮಾಣ ಸಂಸ್ಥೆಯಾಗಿರುವ ವೀಡಿಯೋಕೋನ್ ಇಂಡಸ್ಟ್ರೀಸ್, ಇತರ 40 ಉದ್ಯಮ ಸಂಸ್ಥೆಗಳೊಂದಿಗೆ, ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡುವ ಕುರಿತಾಗಿ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭವಿಷ್ಯದಲ್ಲಿ ಹೆಚ್ಚಿನ ಬಂಡವಾಳ ಅಗತ್ಯವಿರುವುದರಿಂದ ವಿದ್ಯುತ್ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದ್ದು, ಇದು ಭಾರತಕ್ಕೆ ಹೆಚ್ಚಿನ ವ್ಯವಹಾರ ಅವಕಾಶವನ್ನು ತಂದಿದೆ ಎಂದು ವೀಡಿಯೋಕೋನ್ ಮುಖ್ಯಸ್ಥ ಮತ್ತು ಆಡಳಿತ ನಿರ್ದೇಶಕ ವೇಣಿಗೋಪಾಲ್ ಧೂತ್ ತಿಳಿಸಿದ್ದಾರೆ.

ಕೆಲವು ವಿದ್ಯುತ್ ನಿಯಂತ್ರಣ ಸಮಸ್ಯೆಗಳಿದ್ದು, ಆದರೂ ಖಾಸಗಿ ಕ್ಷೇತ್ರಗಳಿಗೆ ಅಣು ವಿದ್ಯುತ್ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸರಕಾರವು ಅನುವು ಮಾಡಿಕೊಡುತ್ತದೆ ಎಂಬ ವಿಶ್ವಾಸವನ್ನು ಕಂಪನಿಯು ಹೊಂದಿದೆ ಎಂದು ದೂತ್ ಹೇಳಿದ್ದಾರೆ.

ಅವರ ಪ್ರಕಾರ, ಅಣು ವಿದ್ಯುತ್ ಕ್ಷೇತ್ರದಿಂದ ಸುಮಾರು 200,000 ಕೋಟಿ ಆದಾಯ ಗಳಿಸಬಹುದಾಗಿದೆ.

ವೀಡಿಯೋಕೋನ್ ಸೇರಿದಂತೆ, ಸುಮಾರು 40ಕ್ಕೂ ಹೆಚ್ಚು ಭಾರತೀಯ ಖಾಸಗಿ ಸಂಸ್ಥೆಗಳು ಅಣು ವಿದ್ಯುತ್ ಯೋಜನೆಯಲ್ಲಿ ಆಸಕ್ತಿ ಹೊಂದಿದ್ದು, ಅಸೋಚಂ ಪ್ರಕಾರ ಇದು ಅಂದಾಜು 40,000 ಮೆಗಾ ವ್ಯಾಟ್ ವಿದ್ಯುತ್‌ನ್ನು ಉತ್ಪಾದಿಸಲಿವೆ ಎಂದು ಧೂತ್ ತಿಳಿಸಿದ್ದಾರೆ.
ಮತ್ತಷ್ಟು
ಲಕ್ಷ್ಮಿ ಮಿತ್ತಲ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
ಸಿಂಗೂರ್ ಒಪ್ಪಂದ: ಟಾಟಾಗೆ ತೃಪ್ತಿ ಇಲ್ಲ
ಎನ್ಎಸ್‌ಜಿ ವಿನಾಯತಿ: ಹೆಚ್ಚು ಬಂಡವಾಳ ನಿರೀಕ್ಷೆ
2020ರ ವೇಳೆ ಮುಂಚೂಣಿಯಲ್ಲಿ ಆಟೋ ಉದ್ಯಮ : ಐಬಿಎಂ
ಗೂಗಲ್‌ಗೆ 10 ವರ್ಷ, ದಿನಕ್ಕೆ 1.5 ಬಿಲಿಯ ಶೋಧಕರು
ಎನ್ಎಸ್‌ಜಿ ವಿನಾಯಿತಿಗೆ ಇಂಡಿಯಾ ಇಂಕ್ ಸ್ವಾಗತ