ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ,ಬಂಗಾಳ ಯೋಜನೆ ಬಗ್ಗೆ ಇನ್ಫೋಸಿಸ್ ಮರುಚಿಂತನೆ
ಟಾಟಾ ಮೋಟಾರ್ಸ್ ಸಿಂಗೂರಿನ ನ್ಯಾನೋ ಸ್ಥಾವರ ಕಾರ್ಯ ಸ್ಥಗಿತವನ್ನು ಮುಂದುವರಿಸುವುದರೊಂದಿಗೆ, ಐಟಿ ಪ್ರಮುಖ ಸಂಸ್ಥೆ ಇನ್ಫೋಸಿಸ್, ಪಶ್ಚಿಮ ಬಂಗಾಲದಲ್ಲಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದು, ಅಗತ್ಯ ಬಂದಲ್ಲಿ ಪಶ್ಚಿಮ ಬಂಗಾಲದ ತನ್ನ ಯೋಜನೆಯ ಬಗ್ಗೆ ಮರುಪರಿಶೀಲನೆ ನಡೆಸಲಾಗುವುದು ಎಂದು ಹೇಳಿದೆ.

ರಾಜ್ಯ ಸರಕಾರದ ಮತ್ತು ಪ್ರತಿಭಟನಾಕಾರರ ನಡುವಿನ ಮಾತುಕತೆಯಲ್ಲಿನ ಸರಕಾರದ ಸ್ಪಷ್ಟನೆಯ ಕೊರತೆಯಿಂದಾಗಿ, ನ್ಯಾನೋ ಸ್ಥಾವರದ ಕಾರ್ಯಸ್ಥಗಿತವನ್ನು ಮುಂದುವರಿಸುವುದಾಗಿ ಟಾಟಾ ಮೋಟಾರ್ಸ್ ಹೇಳಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ ತನ್ನ ಯೋಜನೆಯ ಪುನರ್‌ಪರಿಶೀಲನೆಯತ್ತ ದೃಷ್ಟಿ ಹಾಯಿಸಿದೆ.

ಸಿಂಗೂರಿನಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಯಿಸಿರುವ ಇನ್ಫೋಸಿಸ್, ಸಿಂಗೂರ್ ಭಾರತೀಯ ಉದ್ಯಮ ಕ್ಷೇತ್ರದಲ್ಲಿ ಭೀತಿಯನ್ನು ಮೂಡಿಸಿದೆ. ಇಲ್ಲಿನ ಬೆಳವಣಿಗೆಗಳನ್ನು ಇನ್ಫೋಸಿಸ್ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ ಎಂದಿದೆ.

ಪಶ್ಚಿಮಬಂಗಾಲದಿಂದ ಯೋಜನೆಯನ್ನು ಹಿಂತೆಗೆಯುವ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಅಗತ್ಯವಿದ್ದಲ್ಲಿ ಪರಿಸ್ಥಿತಿಯನ್ನು ಪುನರವಲೋಕಿಸಿ ಮರುಪರಿಶೀಲನೆ ನಡೆಸಲಾಗುವುದು ಎಂದು ಇನ್ಫೋಸಿಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಂಗೂರ್ ವಿವಾದದ ಕುರಿತಾಗಿ ಪಶ್ಚಿಮಬಂಗಾಲದಲ್ಲಿ ತನ್ನ ಯೋಜನೆಯನ್ನು ಪ್ರಾರಂಭಿಸುವ ಬಗ್ಗೆ ಇನ್ಫೋಸಿಸ್ ಮರುಚಿಂತನೆ ನಡೆಸುತ್ತಿದೆ ಎಂದು ಈ ಮೊದಲು ಖಾಸಗಿ ಮಾಧ್ಯಮಗಳು ವರದಿ ಮಾಡಿದ್ದವು.

ಸಿಂಗೂರ್ ವಿವಾದದ ಪರಿಣಾಮಗಳನ್ನು ಇನ್ಫೋಸಿಸ್ ತಿಳಿದುಕೊಂಡಿದ್ದು, ಇದರಿಂದಾಗಿ ಜನರು ಮತ್ತು ನೌಕರರು ಭೀತಿಯನ್ನು ಹೊಂದಿದ್ದಾರೆ. ಇದು ಪಶ್ಚಿಮಬಂಗಾಲದಲ್ಲಿನ ಎಲ್ಲಾ ಕಂಪನಿಗಳು ಮರುಚಿಂತನೆ ಮಾಡಬೇಕಾಗದ ಪರಿಸ್ಥಿತಿಯನ್ನು ತಂದೊಡ್ಡಿದೆ ಎಂದು ಇನ್ಫೋಸಿಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದ್ದವು.
ಮತ್ತಷ್ಟು
ಅಣು ವಿದ್ಯುತ್ ಯೋಜನೆಯತ್ತ ವೀಡಿಯೋಕೋನ್ ದೃಷ್ಟಿ
ಲಕ್ಷ್ಮಿ ಮಿತ್ತಲ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
ಸಿಂಗೂರ್ ಒಪ್ಪಂದ: ಟಾಟಾಗೆ ತೃಪ್ತಿ ಇಲ್ಲ
ಎನ್ಎಸ್‌ಜಿ ವಿನಾಯತಿ: ಹೆಚ್ಚು ಬಂಡವಾಳ ನಿರೀಕ್ಷೆ
2020ರ ವೇಳೆ ಮುಂಚೂಣಿಯಲ್ಲಿ ಆಟೋ ಉದ್ಯಮ : ಐಬಿಎಂ
ಗೂಗಲ್‌ಗೆ 10 ವರ್ಷ, ದಿನಕ್ಕೆ 1.5 ಬಿಲಿಯ ಶೋಧಕರು