ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2010ರೊಳಗೆ ಭಾರತ-ಜರ್ಮನ್ ವ್ಯಾಪಾರ ವೃದ್ಧಿ: ಸಿಬಲ್
ಭಾರತ ಮತ್ತು ಜರ್ಮನ್ ನಡುವಿನ ವಹಿವಾಟು 2010ರೊಳಗೆ ಅಂದಾಜು 30ಬಿಲಿಯನ್‌‌ಷ್ಟು ದಾಟುವ ನಿರೀಕ್ಷೆ ಇರುವುದಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಸಚಿವ ಕಪಿಲ್ ಸಿಬಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಐಐಟಿ ಮದ್ರಾಸ್ ಕಾಲೇಜಿನ ಸುವರ್ಣ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಶೋಧನೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ದೇಶಗಳು ಜಂಟಿಯಾಗಿ ಕಾರ್ಯನಿರ್ವಹಿಸಿದಲ್ಲಿ ಭಾರತ ಮತ್ತು ಜರ್ಮನಿಯ ವಹಿವಾಟು ಮುಂಬರುವ 2020ರ ವೇಳೆಗೆ 50 ಬಿಲಿಯನ್‌ ಯುರೋಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

ಯುರೋಪ್ ಖಂಡದಲ್ಲಿ ಜರ್ಮನಿ ಬೃಹತ್ ಆರ್ಥಿಕತೆಯನ್ನು ಹೊಂದಿರುವ ದೇಶವಾಗಿದ್ದು, ಭಾರತದೊಂದಿಗೆ ಮೂಲಭೂತ ಸೌಕರ್ಯ, ರಸ್ತೆ, ರೈಲು ಹಾಗೂ ಟೆಲಿಕಾಂ ಕ್ಷೇತ್ರಗಳಲ್ಲಿ ಜರ್ಮನಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಬಲ್ ತಿಳಿಸಿದ್ದಾರೆ.
ಮತ್ತಷ್ಟು
ಪ,ಬಂಗಾಳ ಯೋಜನೆ ಬಗ್ಗೆ ಇನ್ಫೋಸಿಸ್ ಮರುಚಿಂತನೆ
ಅಣು ವಿದ್ಯುತ್ ಯೋಜನೆಯತ್ತ ವೀಡಿಯೋಕೋನ್ ದೃಷ್ಟಿ
ಲಕ್ಷ್ಮಿ ಮಿತ್ತಲ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
ಸಿಂಗೂರ್ ಒಪ್ಪಂದ: ಟಾಟಾಗೆ ತೃಪ್ತಿ ಇಲ್ಲ
ಎನ್ಎಸ್‌ಜಿ ವಿನಾಯತಿ: ಹೆಚ್ಚು ಬಂಡವಾಳ ನಿರೀಕ್ಷೆ
2020ರ ವೇಳೆ ಮುಂಚೂಣಿಯಲ್ಲಿ ಆಟೋ ಉದ್ಯಮ : ಐಬಿಎಂ