ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತದೊಂದಿಗೆ ಮುಕ್ತ ವ್ಯಾಪಾರಕ್ಕೆ ಕೆನಡಾ ಒಲವು
ಭಾರತ-ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದಕ್ಕೆ ಎನ್‌ಎಸ್‌ಜಿ (ನ್ಯೂಕ್ಲಿಯರ್ ಸಪ್ಲೈಯರ್ಸ್ ಗ್ರೂಪ್) ಗ್ರೀನ್ ಸಿಗ್ನಲ್ ನೀಡಿದ ಬಳಿಕ ಇದೀಗ ಕೆನಡಾ, ಭಾರತದೊಂದಿ ಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಕೆನಡ ವಿದೇಶಾಂಗ ವ್ಯವಹಾರಗಳ ಸಚಿವ ದೀಪಕ್ ಒಬರಾಯ್ ಅವರು ಮಂಗಳವಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

1974ರಲ್ಲಿ ಭಾರತ ಪ್ರೋಖರಣ್ ಸ್ಫೋಟ ನಡೆಸಿದ ಬಳಿಕ, ಎನ್‌ಎಸ್‌ಜಿ ಭಾರತದೊಂದಿಗೆ ಪರಮಾಣು ಒಪ್ಪಂದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಳಿಕ ಹೆಚ್ಚಿನ ದೇಶಗಳು ಆರ್ಥಿಕ ದಿಗ್ಬಂಧನ ವಿಧಿಸಿದ್ದವು. ಆದರೆ ಭಾರತದ 34 ವರ್ಷಗಳ ಅಣುಬಂಧದ ಹೋರಾಟಕ್ಕೆ ಜಯ ಲಭಿಸಿದ ನಂತರ ಕೆನಡಾ, ಭಾರತದೊಂದಿಗೆ ತಮ್ಮ ದ್ವಿಪಕ್ಷೀಯ ಸಂಬಂಧ ಉತ್ತಮಪಡಿಸಿಕೊಳ್ಳುವುದಾಗಿ ಹೇಳಿದೆ.

ಆ ನಿಟ್ಟಿನಲ್ಲಿ ಭಾರತದೊಂದಿಗೆ ತಮ್ಮ ಸರ್ಕಾರ ಉತ್ತಮ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲು ನಿರ್ಧರಿಸಲಾಗಿದೆ ಎಂದು ಸಚಿವ ದೀಪಕ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

1998ರಲ್ಲಿ ಭಾರತ ಮತ್ತೊಮ್ಮೆ ಪರಮಾಣು ಸ್ಫೋಟ ನಡೆಸಿದ ನಂತರ ಕೆನಡಾದ ಲಿಬರಲ್ ಪಕ್ಷದ ಮಾಜಿ ಪ್ರಧಾನಿ ಜೆನ್ ಚೆರ್ಟೈನ್ ಮತ್ತು ವಿದೇಶಾಂಗ ಸಚಿವ ಲಾಯ್ಡ್ ಆಕ್ಸ್‌ವರ್ಥಿ ಅವರು ಭಾರತದೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದರು ಎಂದು ಅವರು ಆರೋಪಿಸಿದರು.
ಮತ್ತಷ್ಟು
2010ರೊಳಗೆ ಭಾರತ-ಜರ್ಮನ್ ವ್ಯಾಪಾರ ವೃದ್ಧಿ: ಸಿಬಲ್
ಪ,ಬಂಗಾಳ ಯೋಜನೆ ಬಗ್ಗೆ ಇನ್ಫೋಸಿಸ್ ಮರುಚಿಂತನೆ
ಅಣು ವಿದ್ಯುತ್ ಯೋಜನೆಯತ್ತ ವೀಡಿಯೋಕೋನ್ ದೃಷ್ಟಿ
ಲಕ್ಷ್ಮಿ ಮಿತ್ತಲ್‌ಗೆ ಜೀವಮಾನ ಸಾಧನೆ ಪ್ರಶಸ್ತಿ
ಸಿಂಗೂರ್ ಒಪ್ಪಂದ: ಟಾಟಾಗೆ ತೃಪ್ತಿ ಇಲ್ಲ
ಎನ್ಎಸ್‌ಜಿ ವಿನಾಯತಿ: ಹೆಚ್ಚು ಬಂಡವಾಳ ನಿರೀಕ್ಷೆ