ನಾಗರಿಕ ಪರಮಾಣು ಒಪ್ಪಂದ ವಿಷಯದಲ್ಲಿ ಅಮೆರಿಕದೊಂದಿಗೆ ಮುಂದುವರಿಯುಂತೆ ಎನ್‌ಎಸ್‌ಜಿ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಇದೀಗ ಭಾರತದ ವೀಡಿಯೋ ಕಾನ್, ಸಾಜ್ಜನ್ ಜಿಂದಾಲ್ ಕಂಪನಿಗಳು ಪವರ್ ಪ್ಲ್ಯಾಂಟ್‌ಗಾಗಿ 2 ಸಾವಿರ ಕೋಟಿ ರೂಪಾಯಿ ಹೂಡಲು ಮಾತುಕತೆ ನಡೆಸಿರುವುದಾಗಿ ಅಸ್ಸೋಚಾಮ್ ತಿಳಿಸಿದೆ.
ನ್ಯೂಕ್ಲಿಯರ್ ಪವರ್ ಸೆಕ್ಟರ್ ಸ್ಥಾಪನೆಗೆ ಸಂಬಂಧಿಸಿದಂತೆ ಖಾಸಗಿಯವರಿಗೆ ನೀಡಲು ಅನುಕೂಲವಾಗುವಂತೆ ಸಂಸತ್‌ನಲ್ಲಿ ತಿದ್ದುಪಡಿ ತರುವಂತೆ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರನ್ನು ಕೋರಿರುವುದಾಗಿ ಅಸ್ಸೋಚಾಮ್ ಇಂಡಸ್ಟ್ರಿ ಚೇಂಬರ್ ಅಧ್ಯಕ್ಷ ವೇಣುಗೋಪಾಲ್ ದೂತ್ ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದರು.
ಭಾರತ ಮತ್ತು ಅಮೆರಿಕ ನಡುವಿನ ಅಣು ಒಪ್ಪಂದದ ಕುರಿತಂತೆ ವಿಯೆನ್ನಾದಲ್ಲಿ ನಡೆದ ಸಭೆಯಲ್ಲಿ ಎನ್‌ಎಸ್‌ಜಿ ಹಸಿರು ನಿಶಾನೆ ತೋರಿಸಿದ್ದನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ನ್ಯೂಕ್ಲಿಯರ್ ಪವರ್ ಪ್ಲ್ಯಾಂಟ್ ಸ್ಥಾಪನೆಗಾಗಿ 40ಕಂಪೆನಿಗಳು ಆಸಕ್ತಿ ವಹಿಸಿರುವುದಾಗಿ ಹೇಳಿದರು.
ಅಲ್ಲದೇ ಮುಂದಿನ 15 ವರ್ಷಗಳಲ್ಲಿ 40ಸಾವಿರ ಮೆಗಾ ವ್ಯಾಟ್ ವಿದ್ಯುತ್ ಅನ್ನು ಉತ್ಪಾದನೆ ಮಾಡುವ ಯೋಜನೆ ಹೊಂದಿರುವುದಾಗಿ ತಿಳಿಸಿದರು.
ಆ ನಿಟ್ಟಿನಲ್ಲಿ ವೀಡಿಯೋಕಾನ್, ಜಿಂದಾಲ್ ಸೇರಿದಂತೆ 40ಕಂಪೆನಿಗಳು ಮಾತುಕತೆಯನ್ನು ಆರಂಭಿಸಿದ್ದು, ಮುಂದಿನ 15 ವರ್ಷಗಳಲ್ಲಿ ಪರಮಾಣು ಸೆಕ್ಟರ್ ನಿರ್ಮಾಣಕ್ಕಾಗಿ 2ಲಕ್ಷ ಕೋಟಿ ಹೂಡಿಕೆಯಾಗುವ ನಿರೀಕ್ಷೆ ಹೊಂದಿರುವುದಾಗಿ ಅಸ್ಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ಅಭಿಪ್ರಾಯ ವ್ಯಕ್ತಪಡಿಸಿದರು.
|