ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಪೆಕ್ ಸಭೆಗೆ ಮುನ್ನ ತೈಲ ದರಗಳು ಕುಸಿತ
ವಿಯನ್ನಾದಲ್ಲಿ ಒಪೆಕ್ ಸಭೆ ಮುಂದಿರುವಂತೆ ಜಾಗತಿಕ ತೈಲ ದರಗಳಲ್ಲಿ ಇಳಿಕೆಯಾಗಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.

ನ್ಯೂಯಾರ್ಕ್ ಶೇರುಪೇಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 55ಸೆಂಟ್‌ಗಳಿಗೆ ಇಳಿಕೆಯಾಗಿದ್ದು 106.34 ಡಾಲರ್‌ಗಳಿಂದ 105.79 ಡಾಲರ್‌ಗಳಿಗೆ ಇಳಿಕೆಯಾಗಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ.

ತೈಲ ಉತ್ಪಾದನೆ ನಿಗದಿ ಕುರಿತಂತೆ ವಿಯನ್ನಾದಲ್ಲಿ ಒಪೆಕ್ ರಾಷ್ಟ್ರಗಳ ಸಭೆ ನಡೆಯಲಿದ್ದು, ಕಳೆದ ಕೆಲ ತಿಂಗಳುಗಳಿಂದ ತೈಲ ದರಗಳಲ್ಲಿ ಕುಸಿತ ಉಂಟಾಗಿದ್ದರಿಂದ ಉತ್ಪಾದನೆಯನ್ನು ನಿಯಂತ್ರಿಸುವ ಬಗ್ಗೆ ಚರ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ತೈಲ ಸರಬರಾಜಿನಲ್ಲಿ ಹೆಚ್ಚಳವಾಗಿ ದರ ಕುಸಿತವಾಗುವ ಸಾಧ್ಯತೆಗಳಿರುವುದರಿಂದ ಉತ್ಪಾದನೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಅಲ್ಜೀರಿಯಾ, ಇರಾನ್ , ವೆನೆಜುವೆಲಾ ಮತ್ತು ಲಿಬಿಯಾ ದೇಶಗಳು ಒತ್ತಾಯಿಸಿದ್ದು, ಕುವೈತ್, ಅರಬ್‌ ಸಂಯುಕ್ತ ರಾಷ್ಟ್ರ ಈಕ್ವೇಡಾರ್ ರಾಷ್ಟ್ರಗಳು ಯಾವುದೇ ಬದಲಾವಣೆಗಳು ಬೇಡ ಎಂದು ಅಪೆಕ್ ಸಂಸ್ಥೆಯನ್ನು ಒತ್ತಾಯಿಸುತ್ತಿವೆ.
ಮತ್ತಷ್ಟು
ಪರಮಾಣು ಸ್ಥಾವರದತ್ತ ವೀಡಿಯೋಕಾನ್-ಜಿಂದಾಲ್ ಚಿತ್ತ
ಭಾರತದೊಂದಿಗೆ ಮುಕ್ತ ವ್ಯಾಪಾರಕ್ಕೆ ಕೆನಡಾ ಒಲವು
2010ರೊಳಗೆ ಭಾರತ-ಜರ್ಮನ್ ವ್ಯಾಪಾರ ವೃದ್ಧಿ: ಸಿಬಲ್
ಪ,ಬಂಗಾಳ ಯೋಜನೆ ಬಗ್ಗೆ ಇನ್ಫೋಸಿಸ್ ಮರುಚಿಂತನೆ
ಅಣು ವಿದ್ಯುತ್ ಯೋಜನೆಯತ್ತ ವೀಡಿಯೋಕೋನ್ ದೃಷ್ಟಿ
ಲಕ್ಷ್ಮಿ ಮಿತ್ತಲ್‌ಗೆ ಜೀವಮಾನ ಸಾಧನೆ ಪ್ರಶಸ್ತಿ