ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯದಲ್ಲಿ 'ನ್ಯಾನೋ' ಸ್ಥಾಪನೆಗೆ ಮನವೊಲಿಕೆ: ನಿರಾಣಿ
ಪಶ್ಚಿಮಬಂಗಾಳದ ಸಿಂಗೂರ್‌ನಲ್ಲಿ ವಿರೋಧಪಕ್ಷಗಳ ಪ್ರತಿಭಟನೆಗೆ ತತ್ತರಿಸಿರುವ ಟಾಟಾ ಕಂಪೆನಿಯ ನ್ಯಾನೋ ಕಾರು ಉತ್ಪಾದನಾ ಘಟಕವನ್ನು ಕರ್ನಾಟಕದ ಧಾರವಾಡದಲ್ಲಿ ಸ್ಥಾಪಿಸುವಂತೆ ಮನವೊಲಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ನಗರದಲ್ಲಿ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಟಾಟಾ ಕಂಪೆನಿಯ ಮಹತ್ವಕಾಂಕ್ಷೆಯ ನ್ಯಾನೋ ಕಾರು ಘಟಕವನ್ನು ಧಾರವಾಡದಲ್ಲಿ ಸ್ಥಾಪಿಸುವಂತೆ ಮತ್ತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇದಕ್ಕೆ ಸಂಬಂಧಿಸಿದಂತೆ ಬೇಕಾಗುವ ಅಗತ್ಯ ಸವಲತ್ತು ನೀಡಲು ಸರ್ಕಾರ ಬದ್ಧವಿರುವುದಾಗಿ ರತನ್ ಟಾಟಾ ಅವರಿಗೆ ಆಹ್ವಾನ ನೀಡಲಾಗುವುದು ಎಂದು ಅವರು ತಿಳಿಸಿದರು.

ಒಂದು ವೇಳೆ ಸಿಂಗೂರ್ ಸಮಸ್ಯೆ ಬಗೆಹರಿದರೂ, ಎರಡನೇ ಘಟಕವನ್ನು ಕರ್ನಾಟಕದಲ್ಲಿ ತೆರೆಯುವಂತೆ ಕೇಳಿಕೊಳ್ಳಲಾಗುವುದು ಎಂದು ನಿರಾಣಿ ಸ್ಪಷ್ಟಪಡಿಸಿದರು.
ಮತ್ತಷ್ಟು
ಒಪೆಕ್ ಸಭೆಗೆ ಮುನ್ನ ತೈಲ ದರಗಳು ಕುಸಿತ
ಪರಮಾಣು ಸ್ಥಾವರದತ್ತ ವೀಡಿಯೋಕಾನ್-ಜಿಂದಾಲ್ ಚಿತ್ತ
ಭಾರತದೊಂದಿಗೆ ಮುಕ್ತ ವ್ಯಾಪಾರಕ್ಕೆ ಕೆನಡಾ ಒಲವು
2010ರೊಳಗೆ ಭಾರತ-ಜರ್ಮನ್ ವ್ಯಾಪಾರ ವೃದ್ಧಿ: ಸಿಬಲ್
ಪ,ಬಂಗಾಳ ಯೋಜನೆ ಬಗ್ಗೆ ಇನ್ಫೋಸಿಸ್ ಮರುಚಿಂತನೆ
ಅಣು ವಿದ್ಯುತ್ ಯೋಜನೆಯತ್ತ ವೀಡಿಯೋಕೋನ್ ದೃಷ್ಟಿ