ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
1 ರೂ.ಗೆ ವೋಲ್ವೋ ಪ್ರಯಾಣ !
NRB
ನಗರವಾಸಿಗಳಿಗೆ ಇದೊಂದು ಸಂತಸದ ಸುದ್ದಿ, ಬಿಎಂಟಿಸಿಯ ವೋಲ್ವೋ ಬಸ್‌ನಲ್ಲಿ ಕೇವಲ 1 ರೂ.ಪಾವತಿಸಿ ನಗರ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದಾಗಿ ಸಾರಿಗೆ ಸಚಿವ ಆರ್.ಆಶೋಕ್ ಬುಧವಾರ ತಿಳಿಸಿದ್ದಾರೆ.

ನಗರದ ಎಲ್ಲಾ ಪ್ರಯಾಣಿಕರಿಗೆ ಹೈಟೆಕ್ ಬಸ್ ಸೇವೆ ಲಭ್ಯವಾಗಲಿ ಎಂಬ ನಿಟ್ಟಿನಲ್ಲಿ ಈ ಅವಕಾಶ ನೀಡಲಾಗಿದ್ದು, ಇದು ಕೇವಲ ನಾಲ್ಕು ದಿನಗಳು ಮಾತ್ರ ಎಂಬುದಾಗಿ ಅವರು ಹೇಳಿದ್ದು, ಸಾರಿಗೆ ಸಂಸ್ಥೆಯಲ್ಲಿ ನೂತನ ಪ್ರಯೋಗಗಳನ್ನು ಮಾಡುವ ನಿಟ್ಟಿನಲ್ಲಿ ಪ್ರಥಮವಾಗಿ ಈ ಹೆಜ್ಜೆಯನ್ನು ಇಟ್ಟಿರುವುದಾಗಿ ಅಶೋಕ್ ಹೇಳಿದರು.

ಅವರು ಇಂದು ವಿಧಾನಸೌಧದ ಮುಂಭಾಗದಲ್ಲಿ ಬಿಎಂಟಿಸಿಯ ನೂತನ 50ವಜ್ರ ಹಾಗೂ 50 ಸುವರ್ಣ ಬಸ್‌ಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಬಿಎಂಟಿಸಿಗೆ ನೂರು ಬಸ್‌ಗಳನ್ನು ಶೀಘ್ರವೇ ಸೇರ್ಪಡೆಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದ ಅವರು, ಜನರ ಪ್ರಯಾಣಿಕರ ಹೆಚ್ಚಿನ ಅನುಕೂಲಕ್ಕೆ ತಕ್ಕಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮತ್ತಷ್ಟು
ರಾಜ್ಯದಲ್ಲಿ 'ನ್ಯಾನೋ' ಸ್ಥಾಪನೆಗೆ ಮನವೊಲಿಕೆ: ನಿರಾಣಿ
ಒಪೆಕ್ ಸಭೆಗೆ ಮುನ್ನ ತೈಲ ದರಗಳು ಕುಸಿತ
ಪರಮಾಣು ಸ್ಥಾವರದತ್ತ ವೀಡಿಯೋಕಾನ್-ಜಿಂದಾಲ್ ಚಿತ್ತ
ಭಾರತದೊಂದಿಗೆ ಮುಕ್ತ ವ್ಯಾಪಾರಕ್ಕೆ ಕೆನಡಾ ಒಲವು
2010ರೊಳಗೆ ಭಾರತ-ಜರ್ಮನ್ ವ್ಯಾಪಾರ ವೃದ್ಧಿ: ಸಿಬಲ್
ಪ,ಬಂಗಾಳ ಯೋಜನೆ ಬಗ್ಗೆ ಇನ್ಫೋಸಿಸ್ ಮರುಚಿಂತನೆ