ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣಕಾಸು ವಲಯ ಸುಧಾರಣೆಗೆ ಬಿಗಿ ಕ್ರಮ: ಆರ್‌ಬಿಐ
ಆರ್ಥಿಕ ವೃದ್ದಿ ದರ ಹೆಚ್ಚಿಸಲು ಹಣಕಾಸು ವಲಯದ ಸುಧಾರಣೆಗಳಿಗೆ ಉತ್ತೇಜನ ನೀಡಲಾಗುವುದು. ಆದರೆ ಇನ್ನೂ ಹೆಚ್ಚಿನ ಹಣಕಾಸು ಕ್ರಮಗಳನ್ನು ಪ್ರಕಟಿಸುವ ಮೊದಲು ಸನ್ನಿವೇಶವನ್ನು ಅಧ್ಯಯನ ಮಾಡಲಾಗುವುದು ಎಂದು ಆರ್‌ಬಿಐ ಗವರ್ನರ್ ಸುಬ್ಬರಾವ್ ತಿಳಿಸಿದ್ದಾರೆ.

ಸುಮಾರು ಶೇ.9ರಷ್ಟು ನಮ್ಮ ವೃದ್ದಿದರದ ಬೆಳವಣಿಗೆಯಲ್ಲಿ ಹಣಕಾಸು ವಲಯದ ಸುಧಾರಣೆಗಳಿದ್ದು ಪ್ರಮುಖ ಪಾತ್ರ, ಇದನ್ನು ಕಾಪಾಡಿಕೊಂಡು ಮತ್ತೆ ವೃದ್ದಿದರ ಹೆಚ್ಚಿಸಲು ಹಣಕಾಸು ವಲಯದ ಸುಧಾರಣೆಗಳು ಮುಖ್ಯವಾಗುತ್ತವೆ. ಆದರೆ ಇದು ದಕ್ಷ ಸೇವೆಗಳ ಮೂಲಕ ಸರ್ವರನ್ನೂ ಒಳಗೊಳ್ಳುವ ಬೆಳವಣಿಗೆಯಾಗಿರಬೇಕು ಎಂದು ಹೇಳಿದರು.

ಈಗಿರುವ ಶೇ.12.34ರಷ್ಟು ಹಣದುಬ್ಬರ ಅಲ್ಪಾವಧಿಯ ಜಾಗತಿಕ ಪ್ರಕ್ರಿಯೆ.ಇತ್ತೀಚಿನ ದಿನಗಳಲ್ಲಿ ಇದರ ಕಾವು ಕಡಿಮೆಯಾಗುತ್ತಿದೆ ಎಂದರು.

ಕಳೆದ ಕೆಲವು ವರ್ಷಗಳಲ್ಲಿ ಶೇ.9ರ ವೃದ್ದಿದರಕ್ಕೆ ಖಾಸಗಿ ಹಣಹೂಡಿಕೆ ಹೆಚ್ಚಳ, ಖಾಸಗಿ ಬಳಕೆ ರಫ್ತು ಪ್ರಮಾಣ ಹೆಚ್ಚಳ ಮುಖ್ಯ ಕಾರಣಗಳಾಗಿದ್ದವು ಎಂದು ಅವರು ಹೇಳಿದರು.
ಮತ್ತಷ್ಟು
ರೂಪಾಯಿ ಮೌಲ್ಯ ಮತ್ತೆ ಕುಸಿತ
1 ರೂ.ಗೆ ವೋಲ್ವೋ ಪ್ರಯಾಣ !
ರಾಜ್ಯದಲ್ಲಿ 'ನ್ಯಾನೋ' ಸ್ಥಾಪನೆಗೆ ಮನವೊಲಿಕೆ: ನಿರಾಣಿ
ಒಪೆಕ್ ಸಭೆಗೆ ಮುನ್ನ ತೈಲ ದರಗಳು ಕುಸಿತ
ಪರಮಾಣು ಸ್ಥಾವರದತ್ತ ವೀಡಿಯೋಕಾನ್-ಜಿಂದಾಲ್ ಚಿತ್ತ
ಭಾರತದೊಂದಿಗೆ ಮುಕ್ತ ವ್ಯಾಪಾರಕ್ಕೆ ಕೆನಡಾ ಒಲವು