ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್: ಕೈಗಾರಿಕೆಗಳಿಗೆ ಶೇ.30 ವಿದ್ಯುತ್ ಕಡಿತ
ಗುಜರಾತ್ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್ (ಜಿಯುವಿಎನ್ಎಲ್) ಬುಧವಾರದಿಂದ ಅನ್ವಯವಾಗುವಂತೆ ರಾಜ್ಯದ ಕೆಲವು ಕೈಗಾರಿಕೆಗಳಿಗೆ ಶೇ.30ರಷ್ಟು ವಿದ್ಯುತ್ ಅನ್ನು ಕಡಿತಗೊಳಿಸಲು ಆದೇಶ ನೀಡಿರುವುದಾಗಿ ಕಂಪೆನಿ ಮೂಲಗಳು ತಿಳಿಸಿವೆ.

ರಸಗೊಬ್ಬರ ಕಾರ್ಖಾನೆ, ಡೈರಿ ಹಾಗೂ ಪ್ಲಾಸ್ಟಿಕ್ ತಯಾರಿಕೆ ಕಾರ್ಖಾನೆಗಳ ಮೇಲೆ ಶೇ.30ರಷ್ಟು ವಿದ್ಯುತ್ ಕಡಿತ ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಳೆ ಕೈ ಕೊಟ್ಟ ಪರಿಣಾಮ ಕೃಷಿಗೆ 2,500ಮೆಗಾ ವ್ಯಾಟ್ ವಿದ್ಯುತ್ ಅತ್ಯಗತ್ಯವಾಗಿರುವ ನಿಟ್ಟಿನಲ್ಲಿ,ರಾಜ್ಯದಲ್ಲಿ ಜಿಯುವಿಎನ್ಎಲ್ ಈ ಕ್ರಮ ಕೈಗೊಂಡಿದೆ.

ಅಲ್ಲದೇ ರಾಜ್ಯಾದ್ಯಂತ ಕೆಲವು ಕೈಗಾರಿಕೆಗಳಿಗೆ ಜಿಯುವಿಎನ್ಎಲ್ ಸೆಪ್ಟೆಂಬರ್ 6ರಿಂದ ಎರಡು ದಿನಗಳ ಕಾಲ ರಜೆಯನ್ನು ಘೋಷಿಸಿತ್ತು. ಆದರೆ ಇದು ಕಂಪೆನಿಗಳಿಗೆ ಯಾವುದೇ ಲಾಭವಾಗಿಲ್ಲ.

ವಿದ್ಯುತ್ ಕೊರತೆಯನ್ನು ನೀಗಿಸುವಂತೆ ಕೈಗಾರಿಕೆಯ ಮುಖಂಡರು ಜಿಯುವಿಎನ್ಎಲ್ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆಗಳು ಯಾವುದೇ ಪ್ರಯೋಜನವಾಗಿಲ್ಲ.
ಮತ್ತಷ್ಟು
ಹಣಕಾಸು ವಲಯ ಸುಧಾರಣೆಗೆ ಬಿಗಿ ಕ್ರಮ: ಆರ್‌ಬಿಐ
ರೂಪಾಯಿ ಮೌಲ್ಯ ಮತ್ತೆ ಕುಸಿತ
1 ರೂ.ಗೆ ವೋಲ್ವೋ ಪ್ರಯಾಣ !
ರಾಜ್ಯದಲ್ಲಿ 'ನ್ಯಾನೋ' ಸ್ಥಾಪನೆಗೆ ಮನವೊಲಿಕೆ: ನಿರಾಣಿ
ಒಪೆಕ್ ಸಭೆಗೆ ಮುನ್ನ ತೈಲ ದರಗಳು ಕುಸಿತ
ಪರಮಾಣು ಸ್ಥಾವರದತ್ತ ವೀಡಿಯೋಕಾನ್-ಜಿಂದಾಲ್ ಚಿತ್ತ