ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್ ರಿಯಲ್ ಎಸ್ಟೇಟ್ ಮ್ಯೂಚುವಲ್ ಫಂಡ್ ಆರಂಭಿಸಲು ಸಿದ್ದತೆ ನಡೆಸಿದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬರುವ ಕೆಲ ತಿಂಗಳುಗಳಲ್ಲಿ ರಿಯಲ್ ಎಸ್ಟೇಟ್ ಮ್ಯೂಚುವಲ್ ಫಂಡ್ ಆರಂಭಿಸುವ ಯೋಜನೆಯನ್ನು ಹೊಂದಿದ್ದೇವೆ ಎಂದು ಎಚ್‌ಡಿಎಫ್‌ಸಿ ಮ್ಯೂಚುವಲ್ ಫಂಡ್‌ನ ವ್ಯವಸ್ಥಾಪಕ ನಿರ್ದೇಶಕ ಮಿಲಿಂದ್ ಬರ್ವೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ರಿಯಲ್ ಎಸ್ಟೇಟ್ ಮ್ಯೂಚುವಲ್ ಫಂಡ್ ಯೋಜನೆ ಇತರ ಯೋಜನೆಗಳಿಗಿಂತ ಭಿನ್ನವಾಗಿದ್ದು, ಸಂಗ್ರಹವಾದ ಹಣವನ್ನು ರಿಯಲ್ ಎಸ್ಟೇಟ್ ಪ್ರೊಜೆಕ್ಟ್‌ಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
|