ಸರಕಾರಿ ಸ್ವಾಮ್ಯದ ಭಾರತ ಸಂಚಾರ ನಿಗಮದಿಂದ 93 ಮಿಲಿಯನ್ ಜಿಎಸ್‌ಎಂ ಲೈನ್ ಸಂಪರ್ಕದ ಪರವಾನಿಗೆ ಪಡೆಯಲು ಜಾಗತಿಕ ಮಟ್ಟದ ಆರು ಪ್ರತಿಷ್ಠಿತ ಕಂಪೆನಿಗಳು ಟೆಂಡರ್ ಸಲ್ಲಿಸಿವೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಪ್ರಮುಖ ಟೆಲಿಕಾಂ ಕಂಪೆನಿ ಹುವಾವೈ ಮತ್ತು ಝಟಿಇ ಮತ್ತು ಸ್ವೀಡನ್‌ನ ಟೆಲಿಕಾಂ ಉಪಕರಣಗಳ ತಯಾರಿಕೆ ಸಂಸ್ಥೆಯಾದ ಎರಿಕ್ಸನ್ ನೊಕಿಯಾ, ಸಿಮನ್ಸ್, ಅಲ್ಕಾಟೆಲ್ ಲೂಸೆಂಟ್ ಮತ್ತು ನೊರ್ಟೆಲ್ ಕಂಪೆನಿಗಳು ಟೆಂಡರ್ ಸಲ್ಲಿಸಿವೆ ಎಂದು ಬಿಎಸ್‌ಎನ್‌ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕುಲದೀಪ್ ಗೋಯಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಹೊಂದಿದ ಚೀನಾದ ಹುವಾವೈ ಕಂಪೆನಿ ಟೆಂಡರ್ ಸಲ್ಲಿಸಲು ಅರ್ಹತೆಯನ್ನು ಪಡೆದಿದೆ. ಜಿಎಸ್‌ಎಂ ಲೈನ್‌ಗಳ ಒಟ್ಟು ಮೊತ್ತ 9-10 ಬಿಲಿಯನ್ ಡಾಲರ್‌ಗಳಾಗಿವೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷ 23ಮಿಲಿಯನ್ ಜಿಎಸ್‌ಎಂ ಲೈನ್‌ಗಳ ಸಂಪರ್ಕ ಟೆಂಡರ್ ಪಡೆಯಲು ಹುವಾವೈ ಟೆಂಡರ್ ಸಲ್ಲಿಸಿದ್ದರೂ ದೇಶದಲ್ಲಿ ಉತ್ಪಾದಕ ಘಟಕವಿರದ ಕಾರಣ ಟೆಂಡರ್‌ನಲ್ಲಿ ಅನರ್ಹತೆಗೊಳಿಸಲಾಗಿತ್ತು.
|